ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ, (Reliance Jio) ತನ್ನ ಅತ್ಯಂತ ಕೈಗೆಟುಕುವ ಡೇಟಾ ವೋಚರ್ ಗಳ (data vouchers) ಮಾನ್ಯತೆಯಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿದೆ. ಇದರಿಂದ ಗ್ರಾಹಕರು ವರ್ಷಾಂತ್ಯದಲ್ಲಿ ಭಾರಿ ಶಾಕ್ ಅನ್ನು ಅನುಭವಿಸಬೇಕಾಗಿವೆ. ಜಿಯೋ, ಕಳೆದ ಆಗಸ್ಟ್‌ನಲ್ಲಿ ಖುಷಿ ಪಡಿಸಿದ್ದರೂ, ಈಗ 19 ಮತ್ತು 29 ರೂಪಾಯಿಗಳ ಡೇಟಾ ವೋಚರ್ ಗಳಲ್ಲಿ ಬದಲಾವಣೆಗಳನ್ನು ಮಾಡಿ, ಗ್ರಾಹಕರಿಗೆ ನಿರಾಸೆಯುಂಟುಮಾಡಿದೆ.
ಹೆಚ್ಚಿನ ಗ್ರಾಹಕರು ತಮ್ಮ ಡೇಟಾ ಅಗತ್ಯಗಳನ್ನು ಈ ಕಡಿಮೆ ಮೊತ್ತದ ರೀಚಾರ್ಜ್‌ಗಳಿಂದ ಪೂರೈಸಿಕೊಳ್ಳುತ್ತಿದ್ದರೆ, ಇತ್ತೀಚೆಗೆ ಈ ವೋಚರ್ ಗಳ ಮಾನ್ಯತೆ ಅವಧಿಯಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿ, 19 ರೂಪಾಯಿಯ ವೋಚರ್‌ನ್ನು ಇಂದಿನಿಂದ ಒಂದು ದಿನ ಮಾತ್ರ ಹಾಗೂ 29 ರೂಪಾಯಿಯ ವೋಚರ್‌ನ್ನು ಎರಡು ದಿನಗಳವರೆಗೆ ಮಾತ್ರ ಮಾನ್ಯವಾಗುವಂತೆ ಮಾಡಲಾಗಿದೆ.
ಹೀಗಾಗಿ, ಈಗ ಕೇವಲ ಡೇಟಾ ಹೆಚ್ಚಿಗೆ ಬೇಕಾದರೆ, ಗ್ರಾಹಕರು ಪುನಃ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ.