ರಿಲಯನ್ಸ್ ಜಿಯೋ (Reliance Jio) ಈಗಾಗಲೇ ಅನೇಕ ಆಫರ್‌ಗಳೊಂದಿಗೆ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಜಿಯೋ 5G ಬಳಕೆದಾರರಿಗೆ VoNR (ವಾಯ್ಸ್ ಓವರ್ ನ್ಯೂ ರೇಡಿಯೋ) ತಂತ್ರಜ್ಞಾನವು ಹೊಸ ಆವಿಷ್ಕಾರವಾಗಿದೆ. ಇದು VoLTE (ವಾಯ್ಸ್ ಓವರ್ LTE) ತಂತ್ರಜ್ಞಾನಕ್ಕಿಂತ ಉತ್ತಮ ಮತ್ತು ಹೆಚ್ಚಿನ ಧ್ವನಿ ಸ್ಪಷ್ಟತೆಯನ್ನು ನೀಡುತ್ತದೆ.
VoNR ತಂತ್ರಜ್ಞಾನವು ಕಾಲ್ ಮಾಡುತ್ತಿರುವಾಗ ಬ್ಯಾಕ್‌ಗ್ರೌಂಡ್ ಶಬ್ದಗಳನ್ನು ತಡೆಯುತ್ತದೆ, ಧ್ವನಿ ಹೆಚ್ಚು ಸ್ಪಷ್ಟವಾಗುತ್ತದೆ. 5G ನೆಟ್‌ವರ್ಕ್ ಬಳಕೆದಾರರಿಗೆ ಉತ್ತಮ ಗುಣಮಟ್ಟದ ಕರೆಗಳನ್ನು ಒದಗಿಸುತ್ತದೆ. ಇದು ನೆಟ್‌ವರ್ಕ್ ಸಮಸ್ಯೆಗಳನ್ನು ಕಡಿಮೆ ಮಾಡಿ, ಕಾಲ್ ಡ್ರಾಪ್ ಅಥವಾ ವಾಯ್ಸ್ ಬ್ರೇಕ್ ಆಗುವುದಿಲ್ಲ.
ಇಡೀ ಟೆಲಿಕಾಂ ಉದ್ಯಮದಲ್ಲಿ, ಜಿಯೋ ಈ ಸೇವೆ ನೀಡುವ ಮೂಲಕ ಮತ್ತಷ್ಟು ಪ್ರಮುಖ ಸ್ಥಾನ ಪಡೆಯುತ್ತಿದೆ. ಇತರ ಟೆಲಿಕಾಂ ಸೇವಾಪ್ರದಾತರು ಈ ತಂತ್ರಜ್ಞಾನವನ್ನು ಬಳಸಲು ಮುಂದಾಗಿದ್ದಾರೆ. ಇದೀಗ ಗ್ರಾಹಕರು ಅತ್ಯಾಧುನಿಕ VoNR ಟೆಕ್ನಾಲಜಿ ಸರ್ವೀಸ್ ಬಯಸುತ್ತಿದ್ದಾರೆ. ಸದ್ಯ ಜಿಯೋ ಮಾತ್ರ ಈ ಸೇವೆಯನ್ನು ಒದಗಿಸುತ್ತಿದೆ.