Mumbai: ಬೆಲೆ ಏರಿಕೆ ಬೆನ್ನಲ್ಲೇ ರಿಲಯನ್ಸ್ ಜಿಯೋ (Reliance Jio) ಮೂರು ತಿಂಗಳಲ್ಲಿ 10 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಕಳೆದುಕೊಂಡಿದೆ. MNP ಪೋರ್ಟ್ (MNP port) ಮೂಲಕ ಬಳಕೆದಾರರು ಬೇರೊಂದು ನೆಟ್‌ವರ್ಕ್ (network) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಬಳಕೆದಾರರ ವಲಸೆಯನ್ನು ತಡೆದು ತನ್ನಲ್ಲಿಯೇ ಉಳಿಸಿಕೊಳ್ಳಲು ರಿಲಯನ್ಸ್ ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಮಾಸ್ಟರ್ ಪ್ಲಾನ್ (master plan) ಮಾಡಿದ್ದಾರೆ.
ಇದೀಗ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ವಿಶೇಷವಾಗಿ ಪ್ರಿಪೇಯ್ಡ್ ಬಳಕೆದಾರರಿಗೆ ಹೊಸ ಪ್ಲಾನ್ ಅನ್ವಯವಾಗುತ್ತದೆ.
ರಿಲಯನ್ಸ್ ಜಿಯೋ 1,029 ರೂಪಾಯಿ ಪ್ಲಾನ್ನಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಕಾಲ್ ಹಾಗೂ ಪ್ರತಿದಿನ 100 SMS ಕಳುಹಿಸುವ ಸೌಲಭ್ಯ ಸಿಗುತ್ತದೆ. 1,029 ರೂ. ಪ್ಲಾನ್‌ನಲ್ಲಿ ಒಟ್ಟು 168GB ಹೈಸ್ಪೀಡ್ ಡೇಟಾ ಅಂದ್ರೆ ಪ್ರತಿದಿನ 2 GB ಲಭ್ಯವಾಗುತ್ತದೆ.
ಈ ಪ್ಲಾನ್ ಮತ್ತೊಂದು ವಿಶೇಷತೆ ಏನಂದ್ರೆ ಇದರಲ್ಲಿ 5G ಇಂಟರ್ನೆಟ್ ಸೇವೆ ಸಹ ಒಳಗೊಂಡಿದೆ. ರಿಲಯನ್ಸ್ ಜಿಯೋ ಗ್ರಾಹಕರು 5G ಇಂಟರ್ನೆಟ್ ಸೇವೆಯನ್ನು ಆನಂದಿಸಬಹುದಾಗಿದೆ. ದಿನದ ಲಿಮಿಟ್ ಅಂತ್ಯವಾದ ಕೂಡಲೇ ಇಂಟರ್ನೆಟ್ ಸ್ಪೀಡ್ 64Kbpsಗೆ ಇಳಿಮುಖವಾಗುತ್ತದೆ.
OTT ಪ್ಲಾಟ್‌ಫಾರಂಗಳಲ್ಲಿ ಸಿನಿಮಾ ಮತ್ತು ವೆಬ್ ಸಿರೀಸ್ ನೋಡುತ್ತಿದ್ರೆ ಇದೇ ಪ್ಲಾನ್ನಲ್ಲಿ ಗ್ರಾಹಕರಿಗೆ ಅಮೆಜಾನ್ ಲೈಟ್ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ.
ಈ ಮೊದಲು ಇದೇ ಪ್ಲಾನ್ನಲ್ಲಿ ಅಮೆಜಾನ್ ಪ್ರೈಮ್ ಆಫರ್ ಕೊಡಲಾಗುತ್ತಿತ್ತು. ಅಮೆಜಾನ್ ಪ್ರೈಮ್ ಲೈಟ್ ಜೊತೆ ಎರಡು ಡಿವೈಸ್ (TV ಅಥವಾ Mobile) ನಲ್ಲಿ ಹೆಚ್ಡಿ ಕ್ವಾಲಿಟಿ ವಿಡಿಯೋ ನೋಡಬಹುದಾಗಿದೆ. ನೀವು ನೇರವಾಗಿ Amazon ನಲ್ಲಿ Prime Lite ಅನ್ನು ಬಳಸಬಹುದು. ಆದರೆ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಕೇವಲ ಒಂದು ಡಿವೈಸ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.