Mysuru : ಮೈಸೂರಿನ ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ (JSS Nursing College, Mysuru) ಬಿಎಸ್ಸಿ ನರ್ಸಿಂಗ್‌ನಲ್ಲಿ ಮೊದಲ ರ್‍ಯಾಂಕ್ ಪಡೆದ ಸ್ಟೆಫಿನ್ ಮ್ಯಾಥ್ಯೂ ಹಾಗೂ 3ನೇ ರ್‍ಯಾಂಕ್ ಪಡೆದ PBBS ನ ಸುಧಾನ್ಯ ಸೇರಿದಂತೆ 113 ವಿದ್ಯಾರ್ಥಿಗಳಿಗೆ ಬುಧವಾರ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಪದವಿ ಪ್ರದಾನ ಮಾಡಲಾಯಿತು. ಚೆನ್ನೈನ ಶ್ರೀರಾಮಚಂದ್ರ ಫ್ಯಾಕಲ್ಟಿ ಆಫ್ ನರ್ಸಿಂಗ್, ಶ್ರೀರಾಮಚಂದ್ರ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್‌ನ ಪ್ರಾಂಶುಪಾಲರಾದ ಡಾ.ಎಸ್.ಜೆ.ನಳಿನಿ ವಿದ್ಯಾರ್ಥಿಗಳಿಗೆ ಪ್ರಮಾಣ ವಿತರಿಸಿದರು.
ವಿದ್ಯಾರ್ಥಿಗಳಾದ ದೇವಿಕಾ, ಬಿ.ಶ್ವೇತಾ ಅವರಿಗೆ ಉತ್ತಮ ವಿದ್ಯಾರ್ಥಿನಿಯರು, ಅಮಿಷಾ ಜೋಶಿ, ಜೆ.ಎ.ಆದಿತ್ಯ ಉತ್ತಮ ಎಸ್‌ಎನ್‌ಎ ಎಕ್ಸಿಕ್ಯುಟಿವ್ ಪ್ರಶಸ್ತಿ, ರೋಸಲಿನ್ ಮತ್ತು ಕೆ.ಸಂಜಯ್‌ಕುಮಾರ್ ಅವರಿಗೆ ಉತ್ತಮ ಎನ್‌ಎಸ್‌ಎಸ್ ಸ್ವಯಂಸೇವಕ ಪ್ರಶಸ್ತಿ, ಜೇಷ್ಮಾ, ಸುಧಾನ್ಯಗೆ ಮೆರಿಟೋರಿಸ್ ಪ್ರಶಸ್ತಿ, , ಮೀನು ಕುಟ್ಟಿ ಉತ್ತಮ ಕ್ಲಿನಿಕಲ್ ವಿದ್ಯಾರ್ಥಿನಿ, ಅಮಿಷಾ ಜೋಶಿ, ಜೆ.ಎ.ಆದಿತ್ಯ ಉತ್ತಮ ಎಸ್‌ಎನ್‌ಎ ಎಕ್ಸಿಕ್ಯುಟಿವ್ ಪ್ರಶಸ್ತಿ ನೀಡಲಾಯಿತು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಡಾ.ಅಶ್ವತಿ ದೇವಿ ಮತಿತ್ತರರು ಉಪಸ್ಥಿತರಿದ್ದರು.