Bengaluru : ಕೈವಾರ (Kaiwara) ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ (M. R. Jayaram) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ (Basavaraj Bommai) ಮತ್ತು ಬಿ.ಎಸ್.ಯಡಿಯೂರಪ್ಪ (B. S. Yediyurappa) ರವನ್ನು ಭೇಟಿ ಮಾಡಿ ಕೈವಾರ ತಾತಯ್ಯ ಅವರ ಜಯಂತಿಯನ್ನು (Kaiwara Tatayya Sri Yogi Nareyana Jayanti) ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು.
ಈ ವೇಳೆ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಅವರು “ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ತಾತಯ್ಯ ಅವರ ಜಯಂತಿಯನ್ನು ಮಾರ್ಚ್ 27ರಂದು ಆಚರಿಸುವುದಾಗಿ ಸರ್ಕಾರ ತಿಳಿಸಿದ್ದು ಕೈವಾರ ತಾತಯ್ಯ ಅವರು ಕ್ರಿಸ್ತಶಕ 1726ರಂದು ಫಲ್ಗುಣ ಮಾಸದ ಹುಣ್ಣಿಮೆಯಂದು ಜನಿಸಿದರೆಂದು ಹೇಳಲ್ಪಡುತ್ತದೆ. ಅದರಂತಯೇ ಶ್ರೀಮಠವು ಅಧಿಕೃತವಾಗಿ ಪ್ರಕಟಿಸಿರುವ ತಾತಯ್ಯ ಅವರ ಜೀವನ ಚರಿತ್ರೆಯಲ್ಲೂ ಇದನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ಅವರ ಜಯಂತಿಯ ದಿನಾಂಕವನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಬೇಕು” ಎಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.