Friday, September 20, 2024
HomeKarnatakaYadagiriಕಕ್ಕೇರಾ ಪುರಸಭೆಗೆ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ

ಕಕ್ಕೇರಾ ಪುರಸಭೆಗೆ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ

Kakkera, Yadgir (Yadagiri) : ಇತ್ತೀಚಿಗೆ ನಡೆದ ಕಕ್ಕೇರಾ ಪುರಸಭೆ ಚುನಾವಣೆಯಲ್ಲಿ (Kakkera Town Municipal Council Election) ಆಯ್ಕೆಯಾದ ಸದಸ್ಯರಿಗೆ ಚುನಾವಣಾಕಾರಿಗಳಾದ ಅಮಿತ್ ಕುಲಕರ್ಣಿ ಹಾಗೂ ನರಸಿಂಹಸ್ವಾಮಿ ಪ್ರಮಾಣಪತ್ರ ವಿತರಿಸಿ, ಹೂಗುಚ್ಛ ನೀಡಿ ಶುಭಶಾಯ ತಿಳಿಸಿದರು.

ಪುರಸಭೆಯ 23 ವಾರ್ಡ್‌ಗಳಿಗೆ ಸುಗಮ ಹಾಗೂ ಶಾಂತಿಯುತ ಚುನಾವಣೆಗೆ ಎಲ್ಲರೂ ಸಹಕರಿಸಿದ್ದೀರಿ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಅವರಿಗೆ ಸಹಾಯ ಮಾಡಿ ಎಂದು ಸದಸ್ಯರಿಗೆ ಚುನಾವಣಾಕಾರಿಗಳು ಹೇಳಿದರು.

ಸದಸ್ಯರಾದ ಶಿಲ್ಪಾ ರಾಠೋಡ್, ಅಮರೇಶ ದೊರೆ, ಶ್ರೀದೇವಿ ಕುರೇರ, ಪರಶುರಾಮ ಗೋವಿಂದರ್, ವೆಂಕಟೇಶನಾಯಕ ಪಾಟೀಲ, ಪರಮಣ್ಣ ಕಮತಗಿ, ದೇವಿಂದ್ರ ದೇಸಾಯಿ, ಜಯಮ್ಮ ಸೊಲಾಪುರ, ನಂದಮ್ಮ ದೇಸಾಯಿ, ನಂದಮ್ಮ ಜುಮ್ಮಾರ, ನಿಂಗಪ್ಪನಾಯ್ಕ್, ಜೆಟ್ಟೆಪ್ಪ ದಳಾ, ಪರಮವ್ವ ಮಲಮುತ್ತೇರ, ಸಣ್ಣಅಯ್ಯಾಳಪ್ಪ ಬಡಿಗೇರ, ಲಕ್ಷ್ಮಿಬಾಯಿ ಕಟ್ಟಿಮನಿ, ಸದ್ದಾಂಹುಸೇನ್, ದುರಗಮ್ಮ ಜುಮ್ಮಾರ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳಾದ ರೇವಪ್ಪ ತೆಗ್ಗಿನಮನಿ, ಜಗದೀಶ, ಚುನಾವಣಾ ಲೆಕ್ಕಪತ್ರಾಧಿಕಾರಿಗಳು ಸೇರಿದಂತೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page