back to top
21.7 C
Bengaluru
Wednesday, September 17, 2025
HomeEntertainmentOTT ಗೆ ಬಂತು ಕನ್ನಡದ Horror-Thriller Hit ಸಿನಿಮಾ ‘Chhoo Mantar’

OTT ಗೆ ಬಂತು ಕನ್ನಡದ Horror-Thriller Hit ಸಿನಿಮಾ ‘Chhoo Mantar’

- Advertisement -
- Advertisement -


2016ರಲ್ಲಿ ಬಿಡುಗಡೆಯಾದ ‘ಕರ್ವ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆಯಿತ್ತು. ರಾಜಾ ಬಂಗಲೆ ಮತ್ತು ಅದರಲ್ಲಿ ನಡೆಯುವ ಭಯಾನಕ ಘಟನೆಗಳು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದವು. ಇದೀಗ ಈ ಚಿತ್ರದ ನಿರ್ದೇಶಕ ನವನೀತ್ ಹೊಸ ಚಿತ್ರ ‘ಛೂ ಮಂತರ್’ (Chhoo Mantar) ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಪ್ರತಿ ವೀಕೆಂಡ್‌ ಓಟಿಟಿಯಲ್ಲಿ ನೋಡಲು ಸೂಕ್ತ ಸಿನಿಮಾಗೆ ಹುಡುಕಾಟ ನಡೆಯುತ್ತದೆ. ಕೆಲವು ಸಂದರ್ಭಗಳಲ್ಲಿ online ರೇಟಿಂಗ್ ನೋಡಿಕೊಂಡು ಸಿನಿಮಾವನ್ನು ಆಯ್ಕೆ ಮಾಡಿದರೆ ನಿರಾಸೆಯಾಗಬಹುದು. ಆದರೆ, ಈ ಬಾರಿ ‘ಛೂ ಮಂತರ್’ ಸಿನಿಮಾವನ್ನು ನೋಡಿದರೆ ನೀವು ಖಂಡಿತಾ ನಿರಾಸೆ ಆಗುವುದಿಲ್ಲ. ಈ ಚಿತ್ರ ಕಾಮಿಡಿ, ಹಾರರ್, ಥ್ರಿಲ್ಲರ್ ಎಲ್ಲವೂ ಹೊಂದಿದ್ದು, ಐಎಂಡಿಬಿಯಲ್ಲಿ 9+ ರೇಟಿಂಗ್ ಪಡೆದಿದೆ.

ಹಾಸ್ಯನಟ ಶರಣ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅವರ ಜೊತೆಗೆ ಚಿಕ್ಕಣ್ಣ ಕೂಡಾ ಉಳ್ಳರಾದ ಹಾಸ್ಯ ನೀಡುತ್ತಾರೆ. ಈ ಚಿತ್ರ ಕೇವಲ ಹಾರರ್ ಮಾತ್ರವಲ್ಲ, ಮನರಂಜನೆಯನ್ನು ಒದಗಿಸುವಂತದ್ದು. ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಪ್ರಭು ಮುಂದ್ಕರ್, ರಜನಿ ಭಾರದ್ವಾಜ್, ವಿಜಯ್ ಚೆಂಡೂರ್ ಸೇರಿ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಗುರು ಕಿರಣ್ ಕೂಡಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದು ಬಂಗಲೆಯಲ್ಲಿ ನಡೆಯುವ ಈ ಕಥೆಯಲ್ಲಿ ಪ್ರೇಕ್ಷಕರನ್ನು ಅಚ್ಚರಿ ಗೊಳಿಸುವ ಹಲವು ಟ್ವಿಸ್ಟ್‌ಗಳಿವೆ. ವಿಶೇಷವಾಗಿ ಮಧ್ಯಂತರದ ಟ್ವಿಸ್ಟ್ ಯಾರೂ ಊಹಿಸದ ರೀತಿಯಾಗಿದೆ.

ನಿರ್ದೇಶಕ ನವನೀತ್ ಅವರ ‘ಛೂ ಮಂತರ್’ ಈಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಹಾರರ್ ಸಿನಿಮಾಗಳು ಇಷ್ಟವಾಗದವರಿಗೂ ಈ ಚಿತ್ರ ವೀಕ್ಷಣೆಗೆ ಸುಲಭವಾಗಿದ್ದು, ಪರಿಪೂರ್ಣ ಮನರಂಜನೆಯನ್ನು ನೀಡುತ್ತದೆ. ಈ ವೀಕೆಂಡ್‌ ಈ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page