ಕರ್ನಾಟಕದಲ್ಲಿ ಸಂಚರಿಸುವ ಅನೇಕ ಖಾಸಗಿ ಬಸ್ ಗಳ ಮೇಲೆ (private bus) ಕನ್ನಡ ಭಾಷೆ ಕಾಣಿಸದೇ ಹೋಗಿದೆ. ಇದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಳಿಮಲೆ ಅವರು ಸಾರಿಗೆ ಆಯುಕ್ತರಿಗೆ ಪತ್ರ ಬರೆದು, ಬಸ್ ಗಳ ಮೇಲೆ ಕನ್ನಡ ಫಲಕಗಳು ಹಾಗೂ ಹೆಸರುಗಳು ಕಡ್ಡಾಯವಾಗಬೇಕು ಎಂದು ತಿಳಿಸಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ ಅವರು, ಪತ್ರ ನಮಗೆ ತಲುಪಿದೆ. ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಗಳು ಕನ್ನಡವನ್ನು ಕಡೆಗಣಿಸುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಬಿಳಿಮಲೆ ಹೇಳಿದ್ದಾರೆ. ಪರವಾನಗಿ ಅಥವಾ ನವೀಕರಣ ಸಮಯದಲ್ಲಿ ಕನ್ನಡ ಬಳಕೆಗೆ ಇಲಾಖೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಪ್ರತಿಕ್ರಿಯಿಸಿ, “ನಾವು ಕನ್ನಡಿಗರು. KSRTC, ಬಿಎಂಟಿಸಿ ಬಸ್ ಗಳಲ್ಲಿಯೂ ಕನ್ನಡ ಇಲ್ಲ. ಹಾಗಿದ್ದರೆ ಅವರ ಮೇಲೆ ಕ್ರಮ ಏಕೆ ಇಲ್ಲ?” ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಪ್ರಾಧಿಕಾರ ಕ್ರಮಕ್ಕೆ ಒತ್ತಾಯಿಸಿದ್ದು, ಸಾರಿಗೆ ಇಲಾಖೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.