Bengaluru: ದಿನೇ ದಿನೇ Covid-19 ಪ್ರಕರಣಗಳು ವೇಗವಾಗಿ ಭಾರತದಾದ್ಯಂತ ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ (Karnataka) ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ 241% ಏರಿಕೆ (Surge) ಕಂಡಿದೆ.
ಕರ್ನಾಟಕದಲ್ಲಿ ಭಾನುವಾರ 1,187 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು 10,292 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿಯೇ 8,671 ಸಕ್ರಿಯ ಪ್ರಕರಣಗಳು ವರದಿಯಾಗಿದೆ. ಕರ್ನಾಟಕದಲ್ಲಿ ಆರು ಸಾವುಗಳು ಸಂಭವಿಸಿದ್ದು, ಬೆಂಗಳೂರು ನಗರ – 3, ದಕ್ಷಿಣ ಕನ್ನಡ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರದಲ್ಲಿ ಪ್ರಕರಣಗಳು ಅತಿ ಹೆಚ್ಚು ದಾಖಲಾಗಿದ್ದು, 923 ಸೋಂಕಿತರು ಮತ್ತು ಮೂವರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡದಲ್ಲಿ 63, ಉಡುಪಿಯಲ್ಲಿ 54, ಮೈಸೂರಿನಲ್ಲಿ 20, ಬೆಳಗಾವಿ, ತುಮಕೂರು ಮತ್ತು ಕೊಡಗಿನಲ್ಲಿ ತಲಾ 12 ಮತ್ತು ಮಂಡ್ಯದಲ್ಲಿ 10 ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿವೆ.
ದಿನದ ರಾಜ್ಯದ ಸಕಾರಾತ್ಮಕತೆಯ ದರವು (Positivity Rate) 1.08 % ಮತ್ತು ಪ್ರಕರಣದ ಸಾವಿನ ಪ್ರಮಾಣವು (Fatality Rate) 0.5 % ರಷ್ಟಿದೆ.