Bengaluru : ಕರ್ನಾಟಕ (Karnataka) ರಾಜ್ಯದಲ್ಲಿ Covid-19 ಸೋಂಕು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದ್ದು, February ಮೊದಲ ವಾರ ಇದು ಗರಿಷ್ಟ ಮಟ್ಟ ತಲುಪಬಹುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr. K. Sudhakar) ತಿಳಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ Lockdown ಜಾರಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ಲಾಕ್ಡೌನ್ ಇದಕ್ಕೆ ಪರಿಹಾರವಲ್ಲ, ಅದರಿಂದ ಜನ ಸಾಮಾನ್ಯರಿಗೆ, ಬಡವರಿಗೆ ತೊಂದರೆಯಾಗುತ್ತದೆ. ಪ್ರಧಾನ ಮಂತ್ರಿಗಳೂ ಸಹ ಅದನ್ನೇ ಹೇಳಿದ್ದಾರೆ. ಜನರೂ ಸಹ ಸೋಂಕನ್ನು ನಿಯಂತ್ರಣಕ್ಕೆ ತರಲು ಸಹಕಾರ ಕೊಡಬೇಕು. ಯಾರೂ ಸಹ ನಿರ್ಲಕ್ಷ್ಯ ಮಾಡಬಾರದು, ಎಲ್ಲರೂ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲನೆ ಮಾಡಬೇಕು” ಎಂದು ತಿಳಿಸಿದ್ದಾರೆ.
“ಅನೇಕ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ ಸಂಜೆಯಿಂದ 2 ನೇ ವಾರದ Weekend Curfew ಜಾರಿಗೆ ಬರಲಿದ್ದು, ಜನರು ಇದಕ್ಕೆ ಸಹಕಾರ ನೀಡಬೇಕು. Booster Dose ಪಡೆಯಲು ಅರ್ಹತೆ ಇರುವವರು ಹಾಗೂ 2ನೇ ಡೋಸ್ ಪಡೆಯದೇ ಇರುವವರು ಶೀಘ್ರವೇ ಲಸಿಕೆಯನ್ನು (Vaccine) ಪಡೆಯಬೇಕು” ಎಂದು ಸಚಿವರು ಮನವಿ ಮಾಡಿದರು. “ರಾಜ್ಯದಲ್ಲಿ ಫೆಬ್ರವರಿ ಮೊದಲ ವಾರ Coronavirus ಮೂರನೆಯ ಅಲೆ ಗರಿಷ್ಟ ಮಟ್ಟವನ್ನು ತಲುಪಿ 3-4 ನೇ ವಾರದಿಂದ ಕಡಿಮೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ 5-6% ರಷ್ಟು ಮಂದಿಗೆ ಮಾತ್ರ ಆಸ್ಪತ್ರೆ ದಾಖಲಾತಿ ಅವಶ್ಯಕತೆ ಇರುವುದು ಸಮಾಧಾನಕರ ವಿಷಯ” ಎಂದು ತಿಳಿಸಿದ್ದಾರೆ.