
Bengaluru (Bangalore) : ಜುಲೈ 1 ರಿಂದ Karnataka ರಾಜ್ಯದಲ್ಲಿ ವಿದ್ಯುತ್ ದರ (Electricity charges Hike) ಹೆಚ್ಚಾಗಲಿದೆ ಎಂದು ಸರ್ಕಾರದ ಇತ್ತೀಚಿನ ಆದೇಶದಲ್ಲಿ ತಿಳಿಸಲಾಗಿದೆ.
ಜುಲೈ 1 ರಿಂದ ವಿದ್ಯುತ್ ದರ 19 ರೂ ಗಳಿಂದ 31 ರೂ ಗೆ ಏರಿಕೆಯಾಗಲಿದ್ದು, ಪ್ರತಿ ತಿಂಗಳು 100 ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು 19 ರೂ ಬದಲು 31 ರೂ ಪಾವತಿಸಬೇಕಾಗುತ್ತದೆ.
ಕಲ್ಲಿದ್ದಲು ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಕುರಿತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದವು. ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಎಸ್ಕಾಂಗಳು ನೀಡಿದ ದರವನ್ನು ಕಡಿತಗೊಳಿಸಿ ಹೊಸ ದರವನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ.
ಎಸ್ಕಾಂಗಳು ಪ್ರತಿ ಯೂನಿಟ್ ಗೆ 38 ರಿಂದ 35 ರೂ. ದರ ಹೆಚ್ಚಿಸಲು ಅನುಮತಿ ಕೋರಿದ್ದವು. BESCOM 55.28 ರೂ, HESCOM 49.54 ರೂ, MESCOM 38.98 ರೂ, CESC 40.47 ರೂ ಮತ್ತು GESCOM 39.36 ರೂ. ಹೆಚ್ಚು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು.