Home Karnataka Bengaluru Urban ರಾಜ್ಯ ಸರ್ಕಾರದಿಂದ ನೆರೆ ಪರಿಹಾರ ಧನ ಪರಿಷ್ಕರಣೆ

ರಾಜ್ಯ ಸರ್ಕಾರದಿಂದ ನೆರೆ ಪರಿಹಾರ ಧನ ಪರಿಷ್ಕರಣೆ

328
Karnataka Government Rain Hit Disaster Management Fund Increase

Bengaluru (Bangalore) : ಕರ್ನಾಟಕದಲ್ಲಿ ನೆರೆ ಹಾವಳಿಯಿಂದ (Karnataka Rain) ಪ್ರಾಣ ಹಾಗೂ ಆಸ್ತಿ ಹಾನಿ ಹೊಂದಿದವರಿಗೆ ನೀಡುವ ಪರಿಹಾರ ಧನದ (Disaster Management fund) ಮೊತ್ತವನ್ನು ರಾಜ್ಯ ಸರ್ಕಾರ (Government of Karnataka) ಪರಿಷ್ಕರಿಸಿ ಆದೇಶ ಹೊರಡಿಸಿದೆ.

ಆದೇಶದ ಪ್ರಕಾರ 2022ನೇ ಸಾಲಿನ ಮುಂಗಾರು ಋತುವಿನಲ್ಲಿ (June 01 – September 30 ವರೆಗೆ) ಅತಿವೃಷ್ಟಿ, ಪ್ರವಾಹದಿಂದ ನೀರು ನುಗ್ಗಿ ಮನೆಗಳ ಗೃಹೋಪಯೋಗಿ ವಸ್ತು, ಬಟ್ಟೆ ಹಾನಿ ಹಾಗೂ ಮನೆಗಳ ಹಾನಿಯಾದಂತಹ ಸಂತ್ರಸ್ಥ ಕುಟುಂಬಗಳಿಗೆ ಕೇಂದ್ರ ಸರ್ರಾಕದ ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ, ಪರಿಷ್ಕೃತ ದರದಲ್ಲಿ ಹೆಚ್ಚುವರಿಯಾಗಿ ಪರಿಹಾರ ಮೊತ್ತವನ್ನು ನೀಡಿ ಸರ್ಕಾರ ಆದೇಶಿಸಿದೆ.

ನೆರೆ ಪರಿಹಾರ ಪರಿಷ್ಕೃತ ದರ

  • ಮನುಷ್ಯ ಜೀವ ಹಾನಿ – ₹4 ಲಕ್ಷದಿಂದ ₹ 5ಲಕ್ಷಕ್ಕೆ ಏರಿಕೆ.
  • ಪ್ರವಾಹ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು, ಬಟ್ಟೆ-ಬರೆ ಹಾನಿ – ₹6,200 ರಿಂದ ₹10,000 ಕ್ಕೆ ಏರಿಕೆ.
  • 75% ಕ್ಕಿಂತ ಹೆಚ್ಚು ಮನೆಹಾನಿ – ₹4,04,900 ರಿಂದ ₹5 ಲಕ್ಷಕ್ಕೆ ಏರಿಕೆ.
  • 25% ರಿಂದ 75% ರಷ್ಟು ತೀವ್ರ ಮನೆ ಹಾನಿ
    • ಕೆಡವಿ ಹೊಸ ಮನೆ ನಿರ್ಮಾಣ – ₹4,04,900 ರಿಂದ ₹5 ಲಕ್ಷಕ್ಕೆ ಏರಿಕೆ.
    • ದುರಸ್ತಿ – ₹2,04,900ರಿಂದ ₹3,00,000ಕ್ಕೆ ಏರಿಕೆ.
  • 15-25% ರಷ್ಟು ಭಾಗಶಃ ಮನೆ ಹಾನಿ – ₹44,800 ರಿಂದ ₹50,000 ರಕ್ಕೆ ಏರಿಕೆ.

ಅತಿವೃಷ್ಟಿ, ಪ್ರವಾಹದಿಂದ ಹಾನಿಯಾಗಿರುವಂತಹ ನೆರೆ ಸಂತ್ರಸ್ಥರಿಗೆ ಈ ಮೇಲ್ಕಂಡ ಪರಿಷ್ಕೃತ ದಾರದಂತೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅನುಮತಿ ನೀಡಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page