back to top
26.7 C
Bengaluru
Tuesday, July 22, 2025
HomeKarnatakaಮಸೀದಿಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಆಜಾನ್‌ ಕೂಗದಿರಲು ತೀರ್ಮಾನ

ಮಸೀದಿಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಆಜಾನ್‌ ಕೂಗದಿರಲು ತೀರ್ಮಾನ

- Advertisement -
- Advertisement -

Bengaluru (Bangalore), Karnataka : ಬೆಳಿಗ್ಗೆ 6 ಗಂಟೆಯ ಬಳಿಕ ಆಜಾನ್‌ (Azan, Azaan) ಕೂಗಲು ಮೈಕ್‌ ಬಳಕೆಗೆ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ (Supreme Court) ನೀಡಿರುವ ಆದೇಶ ಮತ್ತು ಮಾರ್ಗಸೂಚಿಯನ್ನು ಪಾಲಿಸಲು ಮುಸ್ಲಿಂ ಧರ್ಮ ಗುರುಗಳು, ಮೌಲ್ವಿಗಳು ಮತ್ತು ಮುಖಂಡರ ಸಭೆ ತೀರ್ಮಾನಿಸಿ ಬೆಳಿಗ್ಗೆ 5 ಗಂಟೆಗೆ ಮೈಕ್‌ ಮೂಲಕ ಕರ್ನಾಟಕ (Karnataka) ರಾಜ್ಯದ ಎಲ್ಲ ಮಸೀದಿಗಳಲ್ಲೂ (mosques) ಆಜಾನ್‌ ಕೂಗದಿರಲು ನಿರ್ಧರಿಸಲಾಗಿದೆ. ಆದ್ದರಿಂದ ಮುಂಜಾನೆ ಪ್ರಾರ್ಥನೆ ( ಫಜರ್ ನಮಾಜ್ ) ಗೆ ಮೈಕ್ ಇಲ್ಲದೆ ಆಜಾನ್ ನೀಡಲು ಸೂಚಿಸಲಾಗಿದೆ.

ಷರಿಯತ್–ಎ–ಹಿಂದ್‌ ಸಂಘಟನೆಯ ಅಮೀರ್‌–ಎ–ಷರಿಯತ್‌ ಆಗಿರುವ ಮೌಲಾನ ಸಗೀರ್‌ ಅಹಮದ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಕರ್ನಾಟಕ ವಕ್ಫ್‌ ಮಂಡಳಿ ಅಧ್ಯಕ್ಷ ಮೊಹಮ್ಮದ್ ಷಫಿ ಸಾ ಅದಿ ಮಾತನಾಡಿ, ಬೆಳಿಗ್ಗೆ 5 ಕ್ಕೆ ಆಜಾನ್‌ ಕೂಗುವುದು ಪ್ರಾರ್ಥನೆ ಅಲ್ಲ. ಪ್ರಾರ್ಥನೆ ಮಾಡಲು ಕರೆಯುವ ಸಂದೇಶ. ಪ್ರಾರ್ಥನೆಗೆ ಮೈಕ್‌ ಮೂಲಕವೇ ಕರೆ ನೀಡಬೇಕಾಗುತ್ತದೆ. ಆಜಾನ್‌ಗೆ ಸರ್ಕಾರ ಅಥವಾ ಸುಪ್ರೀಂಕೋರ್ಟ್‌ನ ವಿರೋಧವಿಲ್ಲ. ಪೊಲೀಸರಿಂದ ಅನುಮತಿ ಪಡೆದು ಎಲ್ಲ ಮಸೀದಿಗಳೂ ಬೆಳಿಗ್ಗೆ 6 ಗಂಟೆಯ ಬಳಿಕ ಮೈಕ್‌ ಬಳಸಲು ಸೂಚನೆ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಜಮೀರ್‌ ಅಹ್ಮದ್‌, ಮಹ್ಮದ್‌ ಹ್ಯಾರಿಸ್‌, ಮೌಲ್ವಿಗಳು ಸೇರಿದಂತೆ ಮತ್ತಿತರ ಧರ್ಮಗುರುಗಳು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page