back to top
25.2 C
Bengaluru
Friday, July 18, 2025
HomeNewsKenya ದಲ್ಲಿ ಭೀಕರ ಅಪಘಾತ: ಐವರು ಕೇರಳಿಗರು ಸೇರಿ ಆರು ಪ್ರವಾಸಿಗರ ದುರ್ಮರಣ

Kenya ದಲ್ಲಿ ಭೀಕರ ಅಪಘಾತ: ಐವರು ಕೇರಳಿಗರು ಸೇರಿ ಆರು ಪ್ರವಾಸಿಗರ ದುರ್ಮರಣ

- Advertisement -
- Advertisement -

Kenya, Nyandarua district: ಈಶಾನ್ಯ ಕೀನ್ಯಾದ (Kenya) ನ್ಯಾಂಡರುವಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಕೇರಳದವರನ್ನು (Kerala) ಒಳಗೊಂಡು ಒಟ್ಟು ಆರು ಮಂದಿ ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕತಾರ್ನಿಂದ ಬಂದಿದ್ದ 28 ಭಾರತೀಯರ ಪ್ರವಾಸಿ ತಂಡ ಕೀನ್ಯಾ ಭೇಟಿಗೆ ತೆರಳಿದ್ದಾಗ, ನಕುರು ರಸ್ತೆಯಲ್ಲಿನ ಓಲ್ ಜೊರೊರೊಕ್ ಬಳಿ ಬಸ್ಸು ನಿಯಂತ್ರಣ ತಪ್ಪಿ ಹಲವು ಬಾರಿ ಉರುಳಿ ಬಿದ್ದಿದೆ. ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಘಟನೆಯ ಪ್ರತ್ಯಕ್ಷದರ್ಶಿಗಳು ಬಸ್ಸು ತೀವ್ರ ವೇಗದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡಿತೆಂದು ಹೇಳಿದ್ದಾರೆ.

ಮೃತರ ವಿವರ

  • ತಿರುವಲ್ಲಾ ಮೂಲದ ಗೀತಾ ಶೋಜಿ ಐಸಾಕ್
  • ಪಾಲಕ್ಕಾಡ್ ಮೂಲದ ರಿಯಾ (41) ಹಾಗೂ ಅವರ 7 ವರ್ಷದ ಮಗಳು ಟೈರಾ
  • ತ್ರಿಶೂರ್ ಮೂಲದ ಜಸ್ನಾ ಮತ್ತು ಅವರ ಮಗಳು ರುಹಿ ಮೆಹ್ರಿನ್

ಈ ಅಪಘಾತದಲ್ಲಿ 27 ಜನರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ನೈರೋಬಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕತಾರ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಕೀನ್ಯಾದಲ್ಲಿನ ಭಾರತೀಯ ಹೈಕಮಿಷನ್ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಹಾಯ ನೀಡಲು ಕ್ರಮಗಳನ್ನು ತೆಗೆದುಕೊಂಡಿವೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ನೆರವಿಗಾಗಿ ಸಹಾಯವಾಣಿ ಸಂಖ್ಯೆ: +974 55097295

ಈ ಕುರಿತು ಎಕ್ಸ್​ ತಾಣದಲ್ಲಿ ಪೋಸ್ಟ್​ ಮಾಡಿರುವ ರಾಯಭಾರ ಕಚೇರಿ, ನ್ಯಾಂಡರುವಾ ಕೌಂಟಿಯ ಓಲ್ ಜೊರೊರೊಕ್-ನಕುರು ರಸ್ತೆಯಲ್ಲಿ ಸಂಭವಿಸಿದ ಅಪಘಾತ ನೋವುಂಟು ಮಾಡಿದೆ. ಮೃತರ ಕುಟುಂಬಗಳಿಗೆ ನಾವು ಆಳವಾದ ಸಂತಾಪವನ್ನು ಸೂಚಿಸುತ್ತೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page