KGF, Kolar : ಕೆಜಿಎಫ್ ನಗರಕ್ಕೆ ಯರಗೋಳು ಯೋಜನೆಯ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ CPM ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು (Protest).
ಬೇತಮಂಗಲ ಜಲಾಶಯ ತುಂಬಿದ್ದರೂ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ. ಕೆಜಿಎಫ್ ನಗರದಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯರಗೋಳು ಯೋಜನೆಯ ನೀರನ್ನು ತಾಲ್ಲೂಕಿಗೆ ನೀಡಬೇಕು. ಮಾರಿಕುಪ್ಪ–ಕುಪ್ಪಂ ರೈಲು ಮಾರ್ಗದ ಕಾಮಗಾರಿ ಸ್ಥಗಿತಗೊಂಡಿದ್ದು ಅದನ್ನು ಪೂರ್ಣಗೊಳಿಸಲು ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಬೆಮಲ್ ಖಾಸಗೀಕರಣವನ್ನು ನಿಲ್ಲಿಸಬೇಕು. ಚಿನ್ನದ ಗಣಿಯನ್ನು ಪುನರಾರಂಭ ಮಾಡಬೇಕು ಎಂದು ನಗರಸಭೆ ಸದಸ್ಯ ಪಿ.ತಂಗರಾಜ್ ತಿಳಿಸಿದರು.
ಮುಖಂಡ ಆನಂದರಾಜ್, , ಜಯರಾಮನ್, ಶಿವರಾಜ್, ಶಂಕರ್, ಟಿ.ಶ್ರೀನಿವಾಸನ್, ಕೆ.ಗೋವಿಂದರಾಜು ಮತ್ತು ಪಿ.ರಾಮಮೂರ್ತಿ ಉಪಸ್ಥಿತರಿದ್ದರು.