Toronto: ಖಲಿಸ್ತಾನ್ ಪ್ರತ್ಯೇಕತಾವಾದಿ ಸಂಘಟನೆಯ ಉಗ್ರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಪ್ರಕರಣದಲ್ಲಿ ಭಾರತದ ವಿರುದ್ಧ ಯಾವುದೇ ‘ನಿಖರ ಸಾಕ್ಷ್ಯದ ಪುರಾವೆ’ ಇಲ್ಲ ಎಂದು ಕೆನಡಾ (Canada) ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ (Justin Trudeau) ಒಪ್ಪಿಕೊಂಡಿದ್ದಾರೆ.
ಭಾರತದ ವಿರುದ್ಧ ತಾವು ಮಾಡಿದ ಆರೋಪಗಳೆಲ್ಲವೂ ಬೇಹುಗಾರಿಕಾ (intelligence) ಮಾಹಿತಿ ಆಧರಿತವಾಗಿದ್ದವು ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ವಿಚಾರಣಾ ವೇದಿಕೆಯಲ್ಲಿ ಮಾತನಾಡಿದ ಜಸ್ಟಿನ್ ಟ್ರುಡೊ, ಒಪ್ಪಿಕೊಂಡಿದ್ದಾರೆ.
ಇದೀಗ ಈ ಎಲ್ಲಾ ವಿಚಾರಗಳ ಕುರಿತಾಗಿ ಸಾರ್ವಜನಿಕ ವಿಚಾರಣೆ ಎದುರು ಮಾತನಾಡಿರುವ ಜಸ್ಟಿನ್ ಟ್ರುಡೊ, ಕೆನಡಾದ ಸಂಸತ್ ಚುನಾವಣಾ ಪ್ರಕ್ರಿಯೆ ಹಾಗೂ ಕೆನಡಾದ ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ವಿದೇಶೀ ಕೈವಾಡದ ಆರೋಪ ಮಾಡಿದ್ದಾರೆ.
ಜೊತೆಯಲ್ಲೇ ಭಾರತದ ವಿರುದ್ಧ ತಾವು ಮಾಡಿದ ಆರೋಪಗಳಿಗೆ ಸಾಕ್ಷ್ಯವಿಲ್ಲ. ಕೇವಲ ಬೇಹುಗಾರಿಕಾ ಮಾಹಿತಿ ಅನ್ವಯ ಆರೋಪ ಮಾಡಿರೋದಾಗಿ ಹೇಳಿದ್ದಾರೆ.
ಫೈವ್ ಐಸ್ Five Eyes
ಫೈವ್ ಐಸ್ (Five Eyes) ಅನ್ನೋದು ಐದು ದೇಶಗಳ ಬೇಹುಗಾರಿಕಾ ಸಂಪರ್ಕ ಜಾಲ. ಈ ಜಾಲದಲ್ಲಿ ಕೆನಡಾ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ದೇಶಗಳಿವೆ. ಈ ಐದೂ ದೇಶಗಳು ಪರಸ್ಪರ ಬೇಹುಗಾರಿಕಾ ಮಾಹಿತಿ ವಿನಿಯಮ ಮಾಡಿಕೊಳ್ಳುತ್ತವೆ.
ಇದೇ ಸಂಪರ್ಕ ಜಾಲ ತಮಗೆ ಭಾರತದ ಕೈವಾಡದ ಕುರಿತಾದ ಮಾಹಿತಿ ನೀಡಿತ್ತು, ಅದನ್ನು ನಾವು ಗಂಭೀರವಾಗಿ ಪರಿಗಣಿಸಿದೆವು ಎಂದು ಜಸ್ಟಿನ್ ಟ್ರುಡೊ ವಿವರಿಸಿದ್ದಾರೆ.