Antara Gange, Kolar : ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಅಂತರಗಂಗೆಯ ಕಾಶಿ ವಿಶ್ವೇಶ್ವರ (Sri Kashi Vishweshwara temple) ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕೊನೆಗೆ ಸೋಮವಾರ ಜಾತ್ರೆ ನಡೆಯಲಿದ್ದು, ಬಜರಂಗದಳದಿಂದ ಭಾರೀ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಲ್ಲಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳು ಭಾನುವಾರ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಬೃಹತ್ ಸ್ವಾಗತ ಕಮಾನು, ಕೇಸರಿ ಬಂಟಿಂಗ್ ಮತ್ತು ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ.
ದೇಗುಲದಲ್ಲಿ ಅರ್ಚಕ ಮಂಜುನಾಥ್ ದೀಕ್ಷೀತ್ ಅವರ ನೇತೃತ್ವದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಲಿದೆ. ಜಾತ್ರೆಯಲ್ಲಿ ಬಜರಂಗದಳ ಮತ್ತು ವಿಹಿಂಪ ರಾಜ್ಯ ಮತ್ತು ಜಿಲ್ಲಾ ಮುಖಂಡರು, ಹಾಗೂ ಮಾಜಿ ಸಂಸದ ಎಸ್. ಮುನಿಸ್ವಾಮಿ ಭಾಗವಹಿಸಲಿದ್ದಾರೆ.
ಮಂಜು, ಬಸ್‍ನಿಲ್ದಾಣ ವೃತ್ತದಲ್ಲಿ ಮುಂಜಾನೆ 4 ಗಂಟೆಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪೆಂಡಾಲ್ ನಿರ್ಮಿಸಿ ಭಕ್ತರಿಗೆ ನೆರವು ನೀಡಲಾಗುತ್ತಿದೆ. ಸಂಘಟನೆಯ ಬಾಲಾಜಿ, ಅಪ್ಪಿ ಹಾಗೂ ಜಿಲ್ಲಾ ಸಂಚಾಲಕ ಬಾಬು ನೇತೃತ್ವದಲ್ಲಿ ಸಿದ್ಧತೆಗಳು ನಡೆದಿದೆ. ಭಕ್ತರಿಗೆ ಪ್ರಸಾದವೂ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಕುರಿತು ಮಾತನಾಡಿದ ಬಾಲಾಜಿ, “ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಭಕ್ತರು ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು,” ಎಂದು ಮನವಿ ಮಾಡಿದ್ದಾರೆ.
ಅಪ್ಪಿ ಆನಂದ್, ವಿಹಿಂಪ ಕಾರ್ಯದರ್ಶಿ ಬಾಬು, ಮುಖಂಡರು ರವಿ, ಪವನ್, ವಿಶ್ವನಾಥ್, ವಿನಯ್, ಪೃಥ್ವಿ, ಲೋಕೇಶ್, ಸಾಯಿ ಸುಮನ್, ಸಾಯಿಮೌಳಿ, ಸಾಯಿಕುಮಾರ್, ಬದ್ರಿ, ಮಹೇಶ್, ಪ್ರವೀಣ್, ಮೌಳಿ, ಮಂಜು, ದೀಪು, ಲೋಹಿತ್, ಯಶವಂತ್, ಭರತ್, ವೆಂಕಟೇಶಬಾಬಾ, ಭವಾನಿ, ವೆಂಕಿ ಇವರು ಕಳೆದ ಎರಡು ದಿನಗಳಿಂದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.