Kolar : ಮುಳಬಾಗಿಲು (Mulbagal) ನಗರದ ಡಿವಿಜಿ ಗಡಿಭವನದಲ್ಲಿ ದಲಿತ ಸಂಘರ್ಷ ಸಮಿತಿಯಿಂದ (ಸಂಯೋಜಕ) DSS ಆಯೋಜಿಸಿದ್ದ 204ನೇ ಭೀಮಾ ಕೋರೆಗಾಂವ್ (Bhima Koregaon) ವಿಜಯೋತ್ಸವದಲ್ಲಿ ಶಾಸಕ ಎಚ್.ನಾಗೇಶ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಭೀಮಾ ಕೋರೆಗಾಂವ್ ಘಟನೆ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸಗಾಥೆ. ಜಾತಿ, ಅಶೃಷ್ಯತೆ, ಮೇಲು ಕೀಳುಗಳ ವಿರುದ್ಧದ ಮಾನವೀಯ ಮೌಲ್ಯಗಳ ಗೆಲುವಿಗೆ ಈ ಘಟನೆ ಸಾಕ್ಷಿ ಎಂದು ಹೇಳಿದರು.
ದಸಂಸ (ಸಂ) ರಾಜ್ಯ ಸಂಸ್ಥಾಪಕ ಸಂಯೋಜಕ ವಿ.ನಾಗರಾಜ್, ಜಿಲ್ಲಾ ಸಂಘಟನಾ ಸಂಯೋಜಕ ಶ್ರೀನಿವಾಸ್, ತಾಲ್ಲೂಕು ಸಂಯೋಜಕ ಗುಜ್ಜಮಾರಂಡಹಳ್ಳಿ ಜಗದೀಶ್ ತಂಡ, ಉಪನ್ಯಾಸಕ ಆರ್.ಎಂ.ರಾಮಕೃಷ್ಣಪ್ಪ ಮಾತನಾಡಿದರು. ಮಹಿಳಾ ರಾಜ್ಯ ಸಮಿತಿ ಸದಸ್ಯ ಯಶೋದಮ್ಮ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ದಿವಾಕರ್, ನಗರಸಭಾ ಅಧ್ಯಕ್ಷ ರಿಯಾಜ್ ಅಹಮದ್, ಪರುಶರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಕೀಳಹೊಳಲಿ ಸತೀಶ್, ಮದ್ದೇರಿ ಮಂಜು, ನಗರಸಭಾ ಸದಸ್ಯ ಡಿ.ಸೋಮಣ್ಣ, ಮುಖಂಡರಾದ ತಾತ್ತಿಕಲ್ಲು ರಾಮಚಂದ್ರ, ಎಂ.ಪಿ ವಾಜೀದ್, ಫಯಾಝ್ ಖಾನ್, ಬಲ್ಲ ಸೋಮು, ಸೊನ್ನವಾಡಿ ಚಂದ್ರಪ್ಪ, ಎಂ.ಬಿ. ಬಾಲಕೃಷ್ಣ, ತಾತ್ತಿಗಟ್ಟು ಮುನಿರತ್ನಪ್ಪ, ರೆಡ್ಡಿಹಳ್ಳಿ ಅಭಿ, ಎಜಾಜ್ಪಾಷ, ಸಿಬ್ಗತ್, ಹರಿ, ಕೃಷ್ಣ, ಗೋವಿಂದರಾಜು, ಅನೀಲ್ ಕುಮಾರ್, ಡಿ.ವೆಂಕಟ್, ರಾಮಪ್ಪ, ಆವಣಿಗೋಪಿ, ಕೋಡಿಹಳ್ಳಿ ಶ್ರೀನಿವಾಸ್, ಬೈರಕೂರು ಅಮರ್ ಉಪಸ್ಥಿತರಿದ್ದರು.
ಬಂಗಾರಪೇಟೆ (Bangarapet) ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಸಮಾಜ ಸೇನೆ ಸದಸ್ಯರು ಕೋರೆಗಾಂವ್ ವಿಜಯೋತ್ಸವ ಆಚರಿಸಿದರು.