ಉತ್ತರ ಕೋಲ್ಕತ್ತಾದ (Kolkata) ಮಾಣಿಕ್ತಾಲಾ ಪ್ರದೇಶದ ಜೆಎನ್ ರೇ ಆಸ್ಪತ್ರೆ (JN Ray Hospital) ಬಾಂಗ್ಲಾದೇಶದ (Bangladesh) ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಆದೇಶಿಸಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ಹೆಚ್ಚುತ್ತಿರುವುದನ್ನು ಮತ್ತು ಭಾರತ ಧ್ವಜಕ್ಕೆ ಅವಮಾನವನ್ನು ಆಕ್ಷೇಪಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು, “ಬಾಂಗ್ಲಾದೇಶದಿಂದ ಭಾರತಕ್ಕೆ ಅವಮಾನವಾಗಿದೆ. ಆದ್ದರಿಂದ, ನಾವು ಬಾಂಗ್ಲಾದೇಶದ ಪ್ರಜೆಗಳಿಗೆ ಇಂದಿನಿಂದ ಅನಿರ್ದಿಷ್ಟಕಾಲದವರೆಗೆ ಚಿಕಿತ್ಸೆ ನೀಡುವುದಿಲ್ಲ,” ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿ ಸುಭ್ರಾಂಶು ಭಕ್ತ್, “ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ನಿರ್ಧಾರವು ಸೂಕ್ತ ಪ್ರತಿಕ್ರಿಯೆ. ಇತರ ಆಸ್ಪತ್ರೆಗಳೂ ಈ ಕ್ರಮವನ್ನು ಅನುಸರಿಸಬೇಕಾಗಿದೆ,” ಎಂದು ಹೇಳಿದರು.
ಅಧಿಕಾರಿಗಳ ಪ್ರಕಾರ, “ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಅಂದು ಬಾಂಗ್ಲಾ ವಿಭಜನೆ ಹಾಗೂ ಅವರಿಗೆ ಸ್ವಾತಂತ್ರ್ಯ ನೀಡಲು ನಮ್ಮ ಭಾರತದ ಸಹಾಯ ಬೇಕಿತ್ತು, ಇಂದು ಭಾರತವನ್ನು ವಿರೋಧಿಸುತ್ತಿದೆ, ಅದಕ್ಕಾಗಿ ನಾವು ಈ ಕ್ರಮವನ್ನು ಅನುಸರಿಸಿದ್ದೇವೆ, ಇತರ ಆಸ್ಪತ್ರೆಗಳು ಕೂಡ ಈ ಕ್ರಮವನ್ನು ಅನುಸರಿಸುತ್ತದೆ ಎಂದು ಹೇಳಿದರು.
ಇಂತಹ ನಿರ್ಧಾರವು ಬಾಂಗ್ಲಾದೇಶ-ಭಾರತ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.