Home Karnataka Udupi ಕೊಲ್ಲೂರು ದೇವಸ್ಥಾನದಲ್ಲಿ ವೀರಭದ್ರ ದೇವರ ಗರ್ಭಗುಡಿಗೆ ಶಿಲಾನ್ಯಾಸ

ಕೊಲ್ಲೂರು ದೇವಸ್ಥಾನದಲ್ಲಿ ವೀರಭದ್ರ ದೇವರ ಗರ್ಭಗುಡಿಗೆ ಶಿಲಾನ್ಯಾಸ

454
Kollur Sri Mookambika Temple Veerabhadra Swamy Temple Groundbreaking

Kollur, Udupi : ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ (Sri Mookambika Temple) ನಿರ್ಮಾಣ ಮಾಡಲು ಉದ್ದೇಶಿಸಿರುವ ನೂತನ ವೀರಭದ್ರ ದೇವರ (Sri Veerabhadra Swamy Temple) ಗರ್ಭಗುಡಿಗೆ ಭಾನುವಾರ ವಿಧ್ಯುಕ್ತ ಧಾರ್ಮಿಕ ಪೂಜೆ ಜತೆಗೆ ಗರ್ಭಗುಡಿ ನಿರ್ಮಾಣದ ದಾನಿಗಳಾದ ಹೈದರಾಬಾದಿನ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಸ್‌.ಪಿ.ಬಿ. ಮಹೇಶ್‌ ಅವರು ನೂತನ ಗರ್ಭ ಗುಡಿಗೆ ಶಿಲಾನ್ಯಾಸ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ಯಮಿ ಕೃಷ್ಣಮೂರ್ತಿ ಮಂಜ ” ದೇವರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ನನಗೆ ಅವಕಾಶ ಕಲ್ಪಿಸಿರುವುದು ನನ್ನ ಪೂರ್ವ ಜನ್ಮದ ಸುಪ್ರುತ, ನಾನಿಲ್ಲಿ ನಿಮಿತ್ತ ಮಾತ್ರ, ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿ, ಶಿಲ್ಪಿಗಳು ಹಾಗೂ ಭಕ್ತರ ಸಾಂಘಿಕ ಪ್ರಯತ್ನದಿಂದಾಗಿ ಅವಧಿಯೊಳಗೆ ದೇವರ ಗರ್ಭಗುಡಿ ಅನಾವರಣಗೊಳ್ಳಲಿದೆ ” ಎಂದು ಹೇಳಿದರು.

ದೇಗುಲದ ತಂತ್ರಿ ರಾಮಚಂದ್ರ ಅಡಿಗ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡ, ರತ್ನಾ ರಮೇಶ್ ಕುಂದರ್, ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಂ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಅರ್ಚಕರಾದ ಡಾ. ನಾರ್ಸಿ ನರಸಿಂಹ ಅಡಿಗ, ಎನ್‌.ಗೋವಿಂದ ಅಡಿಗ, ಕೆ.ನರಸಿಂಹ ಭಟ್, ಸುರೇಶ್ ಭಟ್, ಮೂರ್ತಿ ಕಾಳಿದಾಸ್ ಭಟ್, ಕೆ.ವೆಂಕಟರಮಣ ಪುರಾಣಿಕ, ಕೆ.ಬಾಲಚಂದ್ರ ರಾವ್, ವಿಷ್ಣುಮೂರ್ತಿ ಉಡುಪ, ಚಂದ್ರಶೇಖರ ಪುರಾಣಿಕ, ಸತ್ಯನಾರಾಯಣ ಅಡಿಗ, ಎಂಜಿನಿಯರ್ ಪ್ರದೀಪ್ ಡಿ.ಕೆ ಹಾಗೂ ಶಿಲ್ಪಿ ದಿನೇಶ್ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page