
Mandya: ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (KRS Dam) ಜಲಾಶಯದ ಗೇಟ್ ನಂಬರ್ 80 ಭಾನುವಾರ (ಮಾರ್ಚ್ 23) ರಾತ್ರಿ ಏಕಾಏಕಿ ತೆರೆದಿದ್ದು, ಸೋಮವಾರ (ಮಾರ್ಚ್ 24) ರಾತ್ರಿವರೆಗೂ ತೆರೆದೆಯೇ ಇತ್ತು. ಈ 24 ಗಂಟೆಗಳ ಅವಧಿಯಲ್ಲಿ ದೋಡ್ಡ ಪ್ರಮಾಣದ 2,000 ಕ್ಯೂಸೆಕ್ ನೀರು ನದಿಗೆ ಹರಿದಿದೆ. ಸೋಮವಾರ ರಾತ್ರಿ ಅಧಿಕಾರಿಗಳು ಗೇಟ್ ಮುಚ್ಚಿದರೂ, ಹೆಚ್ಚಿನ ನೀರು ಹರಿದುಹೋಗಿದ್ದರಿಂದ ತೊಂದರೆ ಅನುಭವಿಸಿದರು.
KRS ಡ್ಯಾಂನ ಗೇಟ್ ಹಾಗೆಯೇ ತೆರೆಯುವುದು ವಿರಳ. ಆದರೆ ಈ ಬಾರಿ ಏಕಾಏಕಿ ತೆರೆಯುವುದರಿಂದ ಅನುಮಾನ ಮೂಡಿಸಿದೆ. ಅಧಿಕಾರಿಗಳ ಪ್ರಕಾರ ಎರಡು ಪ್ರಮುಖ ಕಾರಣಗಳು ಇದಕ್ಕೆ ಸಾಧ್ಯ, ಗೇಟಿನ ಮೋಟಾರ್ ರಿವರ್ಸ್ ಆಗಿರಬಹುದು, ಯಾರಾದರೂ ಉದ್ದೇಶಪೂರ್ವಕವಾಗಿ ಗೇಟ್ ತೆರೆಯಿರಬಹುದು, ನಿಜವಾದ ಕಾರಣ ತನಿಖೆಯಿಂದ ಮಾತ್ರ ತಿಳಿಯಲಿದೆ.
ಘಟನೆ ಅರಿತ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಜಲಾಶಯದ ಸುತ್ತ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಇದರಿಂದ ತನಿಖೆ ನಿಧಾನವಾಗುವ ಸಾಧ್ಯತೆ ಇದೆ.
ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ತುಂಡಾಗಿ ನೀರು ಹಾರಿಬಿಟ್ಟಿತ್ತು. ಇದರಿಂದ ಸಾವಿರಾರು ಕ್ಯೂಸೆಕ್ ನೀರು ಹೊಂಡಕ್ಕಾಗಿತ್ತು, ಆ ಸಂದರ್ಭದಲ್ಲಿ ಸರ್ಕಾರ ತಕ್ಷಣವೇ ಹೊಸ ಗೇಟ್ ಅಳವಡಿಸಿತ್ತು. ಈ ಘಟನೆ ಬಳಿಕ ಸರ್ಕಾರ ರಾಜ್ಯದ ಪ್ರಮುಖ ಜಲಾಶಯಗಳ ಪರಿಶೀಲನೆ ನಡೆಸಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.