Bengaluru: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ಲಗೇಜ್ ನಿಯಮಗಳನ್ನು ಜಾರಿಗೊಳಿಸಿದ್ದು, ಇದು ಜನರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಈಗಲಿಂದ, KSRTC ಬಸ್ಸಿನಲ್ಲಿ 30 ಕೆಜಿ ವರೆಗೂ ಉಚಿತ ಲಗೇಜ್ ಕರೆದೊಯ್ಯಬಹುದು. ಆದರೆ 30 ಕೆಜಿಗಿಂತ ಹೆಚ್ಚು ತೂಕವಿದ್ದರೆ, ಅದರ ಲಗತ್ತಿಗೆ ಹಣ ಪಾವತಿಸಬೇಕಾಗುತ್ತದೆ.
ಯಾವೆಲ್ಲಾ ವಸ್ತುಗಳನ್ನು ಬಸ್ಸಿನಲ್ಲಿ ಕರೆದೊಯ್ಯಬಹುದು
- ಫ್ರಿಡ್ಜ್, ವಾಷಿಂಗ್ ಮಷಿನ್ (40 ಕೆಜಿ)
- ಖಾಲಿ ಕಂಟೈನರ್ (25 ಕೆಜಿ)
- ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್
- ಮೋಲ, ಬೆಕ್ಕು, ನಾಯಿ ಮರಿ, ಪಕ್ಷಿಗಳು – ನಾಯಿ ಇದ್ದರೆ, ಚೈನ್ ಹಾಕಿ ಜವಾಬ್ದಾರಿಯಿಂದ ಸಾಗಿಸಬೇಕು.
- ಜನರು ಈ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಸ್ಸಿನಲ್ಲಿ ಮಕ್ಕಳು ಇರುತ್ತಾರೆ. ನಾಯಿ ಬಾಯಿಟ್ಟು ಎದಾದರೂ ಅನಾಹುತವಾದ್ರೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.
ಉಚಿತ ತೂಕದ ನಿಯಮ
- ಪ್ರತಿ ವಯಸ್ಕರಿಗೆ – 30 ಕೆಜಿ
- ಮಕ್ಕಳಿಗೆ – 15 ಕೆಜಿ
- ಒಟ್ಟಾಗಿ ಪ್ರಯಾಣಿಸಿದರೂ ಉಚಿತ ಲಗೇಜ್ ಮಿತಿಯು 30 ಕೆಜಿಗೆ ಸೀಮಿತ!
“ಈ ಹೊಸ ನಿಯಮಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆ ಕಡ್ಡಾಯ!” ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.