27 ಮಂದಿ ನೂತನ ಶಾಸಕರು, ಉಡುಪಿ ಶಾಸಕ ಯಶ್ಪಾಲ್ (Udupi MLA Yashpal Anand Suvarna)ಸುವರ್ಣ ಅವರ ನೇತೃತ್ವದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ 2 ವರ್ಷಗಳಿಗೆ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಅನುದಾನವು ಮಳೆಹಾನಿ, ಕೃಷಿಹಾನಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಪತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಜೆಡಿಎಸ್ ಶಾಸಕರೂ ಸಹಿ ಹಾಕಿದ್ದಾರೆ.
ಅನುದಾನವನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೇಳಿದ್ದಾರೆ. ಅವುಗಳಲ್ಲಿ ಮಳೆಹಾನಿ, ಕೃಷಿಹಾನಿ, ಶಾಲಾ ಕಟ್ಟಡಗಳು, ರಸ್ತೆ ಕಾಮಗಾರಿಗಳು, ವಿದ್ಯುತ್ ಸೌಲಭ್ಯ ಮತ್ತು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಅಗತ್ಯವಿದೆ.
ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದ ನಮ್ಮ ಕ್ಷೇತ್ರಕ್ಕೆ ಮಳೆಹಾನಿ, ಕೃಷಿಹಾನಿ, ಸಮುದ್ರ ಕೊರೆತ, ಆಸ್ಪತ್ರೆ, ಶಾಲಾ ಕಟ್ಟಡ, ರಸ್ತೆಗಳ ದುರಸ್ಥಿ-ನಿರ್ಮಾಣ, ಕಾಲುಸಂಕ ಹಾಗೂ ಮೋರಿಗಳ ದುರಸ್ಥಿ, ನಿಮಾಣ, ನದಿ ದಂಡೆ ಸಂರಕ್ಷಣೆ ಹಾಗೂ ವಿದ್ಯುತ್-ಬೀದಿ ದೀಪಗಳ ಸೌಕರ್ಯ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸಲು 2023-24 ಮತ್ತು 2024-25ನೇ ಸಾಲಿಗೆ ತಲಾ 50.00 ಕೋಟಿ ರೂ.ನಂತೆ ಒಟ್ಟಾರೆ 100 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿಸಿ, ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕಾಗಿ ಕೋರುತ್ತೇವೆ ಎಂದು ಶಾಸಕರು ಮನವಿ ಮಾಡಿದ್ದಾರೆ.