Bengaluru: ಮಾಗಡಿ ಕ್ಷೇತ್ರದ ಶಾಸಕ HC ಬಾಲಕೃಷ್ಣ (MLA HC Balakrishna) ವಿರುದ್ಧ 1600 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗ ಕಬಳಿಕೆ ಆರೋಪ ಬಂದಿದೆ. ಎನ್ಆರ್ ರಮೇಶ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೂ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಂಗೇರಿಯ ಸರ್ವೇ ನಂಬರ್ 69 ರ 183 ಎಕರೆ ಭೂಮಿಯನ್ನು ಕುರಿತು ವಿವಾದಗಳು ಉಂಟಾಗಿವೆ. 1973 ರಲ್ಲಿ 25 ಜನ ಜಮೀನುರಹಿತರಿಗೆ ಈ ಭೂಮಿಯನ್ನು ಹಂಚಿಕೆಯಾಗಿತ್ತು. SC/ST ಸಮುದಾಯದವರಿಗೆ ಪ್ರತಿ ಜನರಿಗೆ 1.20 ಎಕರೆ ಜಾಗ ಹಂಚಿಕೆಯಾಗಿತ್ತು. ಈ ಜಾಗದಲ್ಲಿ ಹಲವಾರು ಫಲಾನುಭೋಗಿಗಳು ನಿಧನರಾದರು.
ಸರ್ಕಾರದ ಅನುಮತಿ ಇಲ್ಲದೆ, ಸುರೇಂದ್ರ ಎಂಬ ವ್ಯಕ್ತಿ ಈ ಜಾಗವನ್ನು ಮಾರಾಟ ಮಾಡಲು ಸಂಚು ಹಾಕಿದ್ದರು ಎಂದು ಆರೋಪಿಸಲಾಗಿದೆ. ಸುರೇಂದ್ರ, ಕೆಎಸ್ಎಸ್ ರೆಸಿಡೆನ್ಸಿ ಕಂಪನಿಯ ಮಾಲೀಕರಾಗಿದ್ದು, ಅವರು ಹಾಗೂ ಕೆಲ ಪ್ರಭಾವಿಗಳ ಸಹಕಾರದಿಂದ ಈ ಮಾರಾಟ ನಡೆದಿರುವುದಾಗಿ ಆರೋಪಿಸಲಾಗಿದೆ.
ಕೆಂಗೇರಿ ಗ್ರಾಮದಲ್ಲಿ 183 ಎಕರೆ ಸರ್ಕಾರಿ ಭೂಮಿಯು “ಸರ್ಕಾರಿ ಬಂಡೆ” ಪ್ರದೇಶವಾಗಿ ಪರಿಗಣಿಸಲಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುವುದಿಲ್ಲ. ಆದರೆ, ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನು ಉಲ್ಲಂಘಿಸಿ, ನಕಲಿ ದಾಖಲೆಗಳನ್ನು ತಯಾರಿಸಿ, ಈ ಭೂಮಿಯನ್ನು ಕಬಳಿಸುವಲ್ಲಿ ಸಹಕಾರ ನೀಡಿದರೆಂದು ದೂರಿನಲ್ಲಿ ಹೇಳಲಾಗಿದೆ.