Doddaballapura, Bengaluru Rural : Lions Club ವತಿಯಿಂದ ಉಚಿತ ಕಣ್ಣಿನ ಪರೀಕ್ಷಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು (Free Eye Camp and Cataract Surgery) ದೊಡ್ಡಬಳ್ಳಾಪುರ ನಗರದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಅಂತರ ರಾಷ್ಟ್ರೀಯ ನಿರ್ದೇಶಕ ಕೆ.ವಂಶೀಧರಬಾಬು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ವಂಶೀಧರಬಾಬು ” ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಇತರೆ ಕ್ಲಬ್‍ಗಳಿಗೆ ಮಾದರಿಯಾಗಿದೆ, ಸೇವೆಯೇ ಧ್ಯೇಯವನ್ನಾಗಿಸಿಕೊಂಡಿರುವ ಲಯನ್ಸ್ ಸಂಸ್ಥೆಯು ಅಂತರ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಇದುವರೆವಿಗೂ ಲಕ್ಷಾಂತರ ಜನರಿಗೆ ಸದುಪಯೋಗವಾಗಿರುವ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳು ಇನ್ನು ಹೆಚ್ಚು ನಡೆಯಲಿ ಎಂದು ಆಶಿಸುತ್ತೇನೆ” ಎಂದರು .
ಪಿ.ಎಲ್.ಶಾರದಾ ಮತ್ತು ಪಿ.ಸಿ.ಲಕ್ಷ್ಮೀನಾರಾಯಣ್ ಮತ್ತು ಕುಟುಂಬದವರು ಪ್ರಾಯೋಜಿಸಿದ್ದ ಶಿಬಿರಕ್ಕೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಜಿ.ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಿ.ಕೆ.ಮನೋಹರನ್ ನಂಬಿಯಾರ್, ಬಿ.ಎಸ್.ರಾಜಶೇಖರಯ್ಯ, ಎಚ್.ಕೆ.ಗಿರಿಧರ್,ನಾಗರಾಜ್, ಲಯನ್ಸ್ ಕ್ಲಬ್ ಕಾಯದರ್ಶಿ ಕೆ.ಶಿವಶಂಕರ್,ಖಜಾಂಚಿ ಮಂಗಳಗೌರಿಪರ್ವತಯ್ಯ, ಸಹ ಕಾಯದರ್ಶಿ ರೇಖಾವೆಂಕಟೇಶ್, ಲಯನ್ಸ್ ಚಾರಿಟೀಸ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಆರ್.ಎಸ್.ಮಂಜುನಾಥ್, ಪ್ರಭುಸ್ವಾಮಿ ಮತಿತ್ತರರು ಭಾಗವಹಿಸಿದರು.