Bengaluru : ಶುಕ್ರವಾರ ಕರ್ನಾಟಕ ಸರ್ಕಾರ ವಾರಾಂತ್ಯದ ಕರ್ಫ್ಯೂ (Weekend Curfew) Covid-19 ಆದೇಶಗಳನ್ನು ಬದಲಾವಣೆಗಳನ್ನು ಪ್ರಕಟಿಸಿದೆ. ಹೊಸ ಆದೇಶದಲ್ಲಿ, ಬೆಂಗಳೂರು ನಗರದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳು ತರಗತಿಗಳನ್ನು ನಡೆಸಲು ಮತ್ತು ವಕೀಲರ ಕಚೇರಿಗಳು ಮತ್ತು ಕಾನೂನು ಸಂಸ್ಥೆಗಳು ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.
ಕರ್ನಾಟಕದಲ್ಲಿ ಗುರುವಾರ 5,000 ಕ್ಕೂ ಹೆಚ್ಚು ದೈನಂದಿನ ಪ್ರಕರಣಗಳು ವರದಿಯಾಗಿತ್ತು. ಕರ್ನಾಟಕದ ಕಾವಿಡ್ ಸಕ್ರಿಯ ಪ್ರಕರಣಗಳು 30,22,603 ಮತ್ತು ಸಾವಿನ ಸಂಖ್ಯೆ 38,358 ಕ್ಕೆ ತಲುಪಿದೆ. ಕಳೆದ ವಾರದಿಂದ ರಾಜ್ಯದಲ್ಲಿ ಸ್ಥಿರವಾಗಿ ಏರಿಕೆ ಕಂಡಿದ್ದು, ಗುರುವಾರ 5,031 ಹೊಸ ಪ್ರಕರಣಗಳು ವರದಿಯಾಗಿದೆ.
ಹೊಸ ಪ್ರಕರಣಗಳಲ್ಲಿ, 4,324 ಬೆಂಗಳೂರು ನಗರದಿಂದ ವರದಿಯಾಗಿದ್ದು, 172 ಡಿಸ್ಚಾರ್ಜ್ ಹಾಗೂ ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಬೆಂಗಳೂರು ನಗರದಲ್ಲಿ ಈಗ 22,173 ಆಗಿದೆ.