
Chikkaballapur : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Chikkaballapur Lokasabha) ಕಾಂಗ್ರೆಸ್ (Congress) ಅಭ್ಯರ್ಥಿ ರಕ್ಷಾ ರಾಮಯ್ಯ (Raksha Ramaih) ಮತ್ತು JDS BJP ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ (K Sudhakar) ಸೋಮವಾರ ನಾಮಪತ್ರ (Nomination) ಸಲ್ಲಿಸಿದರು.

ಎಂ.ಎಸ್.ರಕ್ಷಾ ರಾಮಯ್ಯ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ₹ 82.83ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಅವರ ಪತ್ನಿ ಅಶಿತ ₹17.02 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಘೋಷಿಸಲಾಗಿದೆ. ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಸುಧಾಕರ್ ಅವರ ಒಟ್ಟು ಆಸ್ತಿಯ ಮೌಲ್ಯ;₹ 7,71,06,834 ಆಗಿದ್ದರೆ ಅವರ ಪತ್ನಿಯ ಚರಾಸ್ತಿ ಮತ್ತು ಸ್ಥಿರಾಸ್ತಿಯ ಮೌಲ್ಯ ₹ 24,04,51,113 ಆಗಿದೆ ಎಂದು ಸುಧಾಕರ್ ನಾಮಪತ್ರದಲ್ಲಿ ತಿಳಿಸಿದ್ದಾರೆ.
ಏ.3ರ ಬುಧವಾರ ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಬೃಹತ್ ರೋಡ್ ಶೋ ನಡೆಸಿ ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರ ಜೊತೆ ತೆರಳಿ ನಾಮಪತ್ರ ಸಲ್ಲಿಸುವರು ಮತ್ತು ಏ.4ರಂದು ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತೊಂದು ಬಾರಿ ನಾಮಪತ್ರ ಸಲ್ಲಿಸುವರು ಎಂದು ಉಭಯ ಪಕ್ಷಗಳ ಮುಖಂಡರು ತಿಳಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಕ್ಕೆ ಇಲ್ಲಿಯವರೆಗೆ 9 ಮಂದಿ ನಾಮಪತ್ರ ಸಲ್ಲಿಸಿದ್ದು, ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿ ಜಿ. ಸುಬ್ರಮಣಿ, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ವೆಂಕಟೇಶ್, ಎಂ.ವಿ. ಬಾಲಮುರಳಿಕೃಷ್ಣ, ಎನ್.ಸುಧಾಕರ್ ಮತ್ತು ಎಲ್.ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ
For Daily Updates WhatsApp ‘HI’ to 7406303366
The post ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ ಮತ್ತು ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ.