Los Angeles: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗಾಗಿ (Los Angeles Olympics) ಸಂಪೂರ್ಣ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಬಾರಿ ಮೊದಲ ಬಾರಿಗೆ ಕ್ರಿಕೆಟ್ ಸಹ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೇರ್ಪಡೆಗೊಂಡಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ.
ಕ್ರಿಕೆಟ್ ಪಂದ್ಯಾವಳಿಯ ಪ್ರಮುಖ ದಿನಾಂಕಗಳು
- ಕ್ರಿಕೆಟ್ ಪಂದ್ಯಗಳು ಜುಲೈ 12 ರಿಂದ ಆರಂಭವಾಗುತ್ತವೆ.
- ಮಹಿಳಾ ವಿಭಾಗದ ಫೈನಲ್ ಜುಲೈ 20ರಂದು,
- ಪುರುಷರ ಫೈನಲ್ ಜುಲೈ 29ರಂದು ನಡೆಯಲಿದೆ.
- ಜುಲೈ 14 ಮತ್ತು 21ರಂದು ಯಾವುದೇ ಪಂದ್ಯಗಳು ನಡೆಯುವುದಿಲ್ಲ.
ಕ್ರಿಕೆಟ್‌ಗಾಗಿ ನಿರ್ಧಾರವಾದ ತಂಡಗಳು
- ಒಟ್ಟು 6 ಪುರುಷ ಮತ್ತು 6 ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ.
- ಪ್ರತಿ ತಂಡದಲ್ಲಿ 15 ಆಟಗಾರರು ಇರುತ್ತಾರೆ.
- ಆದರೆ ಯಾವ ಯಾವ ದೇಶಗಳು ಈ ಪಂದ್ಯಕ್ಕೆ ಅರ್ಹತೆ ಪಡೆಯುತ್ತವೆ ಎಂಬ ನಿರ್ಧಾರ ಇನ್ನೂ ಬಾಕಿಯಿದೆ.
ಪೊಮೆನಾದಲ್ಲಿ ಪಂದ್ಯಗಳು: ಈ ಪಂದ್ಯಗಳು ಲಾಸ್ ಏಂಜಲೀಸ್‌ನಿಂದ 50 ಕಿಮೀ ದೂರದ ಪೊಮೆನಾ ಫೇರ್‌ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಪ್ರತಿದಿನ ಎರಡು ಪಂದ್ಯಗಳನ್ನು ಆಯೋಜಿಸಲಾಗುತ್ತದೆ.
ಕ್ರಿಕೆಟ್ ಒಲಿಂಪಿಕ್ಸ್‌ಗೆ ಹಿಂದಿನ ಇತಿಹಾಸ
- 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಒಂದು ಬಾರಿ ಮಾತ್ರ ನಡೆಯಿತ್ತು.
- ಕೇವಲ ಬ್ರಿಟನ್ ಮತ್ತು ಫ್ರಾನ್ಸ್ ತಂಡಗಳು ಭಾಗವಹಿಸಿದ್ದವು.
- ಬ್ರಿಟನ್ ಚಿನ್ನದ ಪದಕ ಗೆದ್ದ ಏಕೈಕ ಕ್ರಿಕೆಟ್ ತಂಡ ಎಂಬ ದಾಖಲೆ ಹೊಂದಿದೆ.
ಐದು ಹೊಸ ಕ್ರೀಡೆಗಳ ಸೇರ್ಪಡೆ
ಕ್ರಿಕೆಟ್ ಜೊತೆಗೆ ಈ ಬಾರಿಗೆ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಈ ಹೊಸ ಕ್ರೀಡೆಗಳನ್ನೂ ಸೇರಿಸಲಾಗಿದೆ.
- ಬೇಸ್ಬಾಲ್/ಸಾಫ್ಟ್ಬಾಲ್
- ಫ್ಲ್ಯಾಗ್ ಫುಟ್ಬಾಲ್
- ಲ್ಯಾಕ್ರೋಸ್ (ಸಿಕ್ಸಸ್ ಮಾದರಿ)
- ಸ್ಕ್ವ್ಯಾಷ್