Bengaluru: ತಿಂಗಳ ಮೊದಲ ದಿನವೇ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ (LPG cylinder) ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ. ಮಂಗಳವಾರ ಬೆಳಗ್ಗೆಯೇ ಎಲ್ಪಿಜಿ ಸಿಲಿಂಡರ್ (LPG cylinder)ಬೆಲೆ ಹೆಚ್ಚಳ ಮಾಡಲಾಗಿದೆ.
1ನೇ ಅಕ್ಟೋಬರ್ 2024ರಿಂದಲೇ ಇಂಧನ ಕಂಪನಿಗಳು ಬೆಲೆಯನ್ನು ಹೆಚ್ಚಳ ಮಾಡಿಕೊಂಡಿವೆ. ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಏರಿಕೆಯಾಗಿದೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದಲ್ಲಿನ (crude oil) ಬದಲಾವಣೆಗೆ ಅನುಸಾರವಾಗಿ ಸಿಲಿಂಡರ್, ಪೆಟ್ರೋಲ್ ಹಾಗೂ ಡೀಸೆಲ್ (petrol and diesel) ಬೆಲೆಯನ್ನು ಹೆಚ್ಚಿಸಲಾಗುತ್ತದೆ. ಅದರಂತೆ ಮಂಗಳವಾರವೂ ಕಚ್ಚಾ ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG gas cylinder) ಬೆಲೆ ಹೆಚ್ಚಳವಾಗಿದೆ. 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಮಂಗಳವಾರದಿಂದ ಒಮ್ಮೆಗೆ 48.50 ರೂಪಾಯಿ ಹೆಚ್ಚಿಸಲಾಗಿದೆ.
ಐಓಸಿಎಲ್ ವೆಬ್ಸೈಟ್ ಪ್ರಕಾರ, (IOCL website) 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ನ ಹೊಸ ಬೆಲೆಗಳು ಇಂದಿನಿಂದ ಅನ್ವಯವಾಗಲಿವೆ. ಆದ್ರೆ ಬೆಲೆಗಳು ನಗರದಿಂದ ನಗರಕ್ಕೆ ವ್ಯತ್ಯಾಸವಾಗಿರುತ್ತವೆ.
ದೆಹಲಿಯಿಂದ ಮುಂಬೈನವರೆಗೂ ಬೆಲೆಗಳು ಭಿನ್ನವಾಗಿರುತ್ತವೆ. ಮುಂಬೈನಲ್ಲಿ 1644 ರೂಪಾಯಿಯಿದ್ದ 19 ಕೆಜಿ ಸಿಲಿಂಡರ್ ಬೆಲೆ ಇದೀಗ 1,692.50 ರೂ ಆಗಿದೆ. ಸೆಪ್ಟೆಂಬರ್ನಲ್ಲಿ 39 ರೂ.ಗಳಷ್ಟು ಏರಿಕೆಯಾಗಿತ್ತು.
Hotel ಮಾಲೀಕರಿಗೆ ಬಿಸಿ
ಬೆಲೆ ಏರಿಕೆಯ ಆತಂಕ ಇದೀಗ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಏಕಾಏಕಿ ಹೆಚ್ಚಳ ಮಾಡಿರುವುದು ಹೋಟೆಲ್ ಮಾಲೀಕರಿಗೆ ಶಾಕ್ ನೀಡಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ.
ಕಳೆದ ಆರು ತಿಂಗಳ ಅವಧಿಯಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಲು, ಮೊಸರು ಹಾಗೂ ತುಪ್ಪದ ಬೆಲೆಯೂ ಹೆಚ್ಚಳವಾಗಿದೆ.
ಇದೀಗ 50 ರೂಪಾಯಿನಷ್ಟು ಬೆಲೆ ಏರಿಕೆ ಮಾಡಲಾಗಿದೆ. ಸಿಲಿಂಡರ್ ಬೆಲೆ ಏರಿಕೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಹೋಟೆಲ್ ಮಾಲೀಕರು ಹೋಟೆಲ್ನ ತಿನಿಸುಗಳ ಬೆಲೆಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಬೆಲೆ ಏರಿಕೆಯ ಬಿಸಿಯು ಪರೋಕ್ಷವಾಗಿ ಗ್ರಾಹಕರ ಜೋಬನ್ನೇ ಸುಡಲಿದೆ.