ನಿಸ್ಸಾನ್ ಮೋಟಾರ್ ಇಂಡಿಯಾ, (Nissan Motor India) ತನ್ನ ‘ಮ್ಯಾಗ್ನೈಟ್’ (Magnite) SUV ಲೆಫ್ಟ್-ಹ್ಯಾಂಡ್ ಡ್ರೈವ್ (LHD) ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಜನವರಿ ಕೊನೆಯಲ್ಲಿ 2,900 LHD ಕಾರುಗಳನ್ನು ಲ್ಯಾಟಿನ್ ಅಮೆರಿಕಕ್ಕೆ ರವಾನಿಸಲಾಗಿದ್ದು, ಈ ಫೆಬ್ರವರಿಯಲ್ಲಿ 7,100 ಕಾರುಗಳನ್ನು ಇತರೆ ಪ್ರಾಂತ್ಯಗಳಿಗೆ ರಫ್ತು ಮಾಡಲಾಗುವುದು. ಅಂತಿಮವಾಗಿ, 10,000ಕ್ಕೂ ಹೆಚ್ಚು ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಉದ್ದೇಶವಿದೆ.
Nissan Magnite SUVವಿಶೇಷತೆಗಳು
- ಬೆಲೆ: ₹6.12 ಲಕ್ಷದಿಂದ ₹11.72 ಲಕ್ಷ.
- 1-ಲೀಟರ್ ನ್ಯಾಚುರಲ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗಳು.
- 5-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್/ಸಿ.ವಿ.ಟಿ. gearbox.
- 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮತ್ತು 360-ಡಿಗ್ರಿ ಕ್ಯಾಮೆರಾ.
- 6 Airbags, ಟಿಪಿಎಂಎಸ್, ಮತ್ತು ESC ಸೇರಿದಂತೆ ಸುರಕ್ಷತಾ ವೈಶಿಷ್ಟ್ಯಗಳು.