Home Karnataka Bengaluru Urban ವಿದ್ಯಾ ಮಂತ್ರಿಗೆ ‘ಕನ್ನಡಬರಲ್ಲ’ ಎಂದ ವಿದ್ಯಾರ್ಥಿ, Madhu Bangarappa ಗೆ ಮುಜುಗರ

ವಿದ್ಯಾ ಮಂತ್ರಿಗೆ ‘ಕನ್ನಡಬರಲ್ಲ’ ಎಂದ ವಿದ್ಯಾರ್ಥಿ, Madhu Bangarappa ಗೆ ಮುಜುಗರ

Madhu Bangarappa

Bengaluru: ವಿದ್ಯಾರ್ಥಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ಭಾರೀ ಮುಜುಗರ ಉಂಟಾಯಿತು.

ವಿಧಾನಸೌಧದಲ್ಲಿ ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ online ಮೂಲಕ NEET, JEE, CET ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಧು ಬಂಗಾರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುತ್ತಿದ್ದರು. ಈ ಸಮಯದಲ್ಲಿ ವಿದ್ಯಾರ್ಥಿಯೊಬ್ಬ, ವಿದ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದು ಸಚಿವರಿಗೆ ಕೇಳುವಂತೆ ಜೋರಾಗಿ ಹೇಳಿದ್ದಾನೆ.

ಈ ಮಾತು ಕೇಳಿ ಗರಂ ಆದ ಮಧು ಬಂಗಾರಪ್ಪ, “ಯಾರು ಹೇಳಿದ್ರೂ ಹಾಗೆ? ನಾನು ಉರ್ದು ಮಾತಾಡಿದೆನೇ? ನಾನು ಕನ್ನಡದಲ್ಲೇ ಮಾತನಾಡುತ್ತಿದ್ದೇನೆ!” ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ಮಧು ಬಂಗಾರಪ್ಪ ಕೂಡಲೇ ಗರಂ ಆಗಿ “ಯಾರು ಹಾಗೆ ಹೇಳಿದ್ರು, ಡೀಟೇಲ್ಸ್ ತೆಗೆದುಕೊಳ್ಳಿ” ಎಂದು ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಸದ್ಯಕ್ಕೆ, ಈ ರೀತಿ ಹೇಳಿದ ವಿದ್ಯಾರ್ಥಿಯ ಬಗ್ಗೆ ವಿವರಗಳು ಇನ್ನೂ ತಿಳಿದುಬಂದಿಲ್ಲ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version