Friday, June 21, 2024
HomeKarnatakaRamanagaraಸಂಸ್ಕೃತ ವಿ.ವಿ ಸ್ಥಾಪನೆಯಾದರೆ ವಿಶ್ವವೇ ಮಾಗಡಿಯತ್ತ ನೋಡುತ್ತದೆ

ಸಂಸ್ಕೃತ ವಿ.ವಿ ಸ್ಥಾಪನೆಯಾದರೆ ವಿಶ್ವವೇ ಮಾಗಡಿಯತ್ತ ನೋಡುತ್ತದೆ

Magadi, Ramanagara : ಮಾಗಡಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (Government First Grade College) ಹಳೆಯ ಕಟ್ಟಡದ ದುರಸ್ತಿಗೆ ಶಾಸಕ ಎ.ಮಂಜುನಾಥ್‌ ಭೂಮಿಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಸಂಸ್ಕೃತ ವಿ.ವಿ. (Sanskrit University) ಸ್ಥಾಪನೆಯಾದರೆ ವಿಶ್ವವೇ ಮಾಗಡಿ ತಾಲ್ಲೂಕಿನತ್ತ ನೋಡುತ್ತದೆ. ಹೋರಾಟ ಮಾಡುತ್ತಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ತಾಲ್ಲೂಕಿನಲ್ಲಿ ಕಾನೂನು ಕಾಲೇಜು ಮತ್ತು ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಲು ಸ್ಥಳ ಗುರುತಿಸಲಾಗುತ್ತಿದೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೌಚಾಲಯ, ಕಿಟಕಿ, ರಸ್ತೆ, ಚರಂಡಿ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಹಳೆಯ ಕಟ್ಟಡವನ್ನು ₹50 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗುವುದು. ಸಭಾಂಗಣದ ಅವಶ್ಯಕತೆಯಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದು, ಸ್ಥಳ ಗುರುತಿಸಿ ಸಭಾಂಗಣ ನಿರ್ಮಿಸಲಾಗುವುದು” ಎಂದು ತಿಳಿಸಿದರು.

ಪ್ರಾಂಶುಪಾಲೆ ಡಾ.ಎಸ್ ಶೈಲಜಾ, ಪುರಸಭಾ ಅಧ್ಯಕ್ಷೆ ವಿಜಯಾಲಕ್ಷ್ಮೀ ಜಿ. ರೂಪೇಶ್, ಉಪಾಧ್ಯಕ್ಷ ರಹಮತ್ ಖಾನ್, ಮಾಜಿ ಅಧ್ಯಕ್ಷೆ ಭಾಗ್ಯಮ್ಮ ನಾರಾಯಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಕಾಂತರಾಜು, ಸದಸ್ಯರಾದ ನಾಗರತ್ನಮ್ಮ ರಾಜಣ್ಣ, ಅನಿಲ್ ಕುಮಾರ್, ಹೇಮಲತಾ ನಾಗರಾಜು, ಗ್ರಾ.ಪಂ ಸದಸ್ಯ ಶ್ರೀಪತಿಹಳ್ಳಿ ಕೃಷ್ಣಪ್ಪ, ತಗ್ಗಿಕುಪ್ಪೆ ಟಿ.ಹೆಚ್ ರಾಮಯ್ಯ, ಎಪಿಎಂಸಿ ನಿರ್ದೇಶಕ ಕೆಂಪಸಾಗರ ಕೆ.ಟಿ ಮಂಜುನಾಥ್, ಜಿ.ಕೃಷ್ಣಮೂರ್ತಿ, ಗಿರಿಧರ್ ಗೌಡ, ವಿನೋದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page