ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ (Maha Kumbh Mela 2025) ಮತ್ತೊಂದು ಅವಘಡ ಸಂಭವಿಸಿದೆ. ಬೆಂಕಿ ಅವಘಡ, ಕಾಲ್ತುಳಿತದ ನಂತರ ಈ ಬಾರಿ ಬಲೂನ್ ಸ್ಫೋಟದಿಂದ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ಸೆಕ್ಟರ್ 21 ರಲ್ಲಿ ಬಿಸಿ ಗಾಳಿಯ ಬಲೂನ್ ಸ್ಫೋಟಗೊಂಡು ನಿಖಿಲ್ (16), ಪ್ರದೀಪ್ (27), ಮಾಯಾಂಕ್ (50), ಲಲಿತ್ (32), ಅಮನ್ (13) ಮತ್ತು 20 ವರ್ಷದ ಅಪರಿಚಿತ ಯುವಕ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸೆಕ್ಟರ್ 20 ರಲ್ಲಿನ ಸಬ್-ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ದು, ಬಳಿಕ NRN ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕುಂಭಮೇಳದ SSP ರಾಜೇಶ್ ದ್ವಿವೇದಿ ಪ್ರಕಾರ, ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.