Maharastra : ಇತ್ತೀಚೆಗಷ್ಟೇ Nigeriaಕ್ಕೆ ಪ್ರಯಾಣ ಬೆಳೆಸಿದ್ದ 52 ವರ್ಷದ ವ್ಯಕ್ತಿಯೊಬ್ಬರು ಪುಣೆಯ ಹೊರವಲಯದಲ್ಲಿರುವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅವರಲ್ಲಿ ಕೋವಿಡ್‌ನ ಓಮಿಕ್ರಾನ್ ಸ್ಟ್ರೈನ್ (Covid-19 Omicron Strain) ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆಯು ವ್ಯಕ್ತಿಗೆ “ಕೋವಿಡ್ ಅಲ್ಲದ ಕಾರಣಗಳಿಂದ” ಸಾವು ಸಂಭವಿಸಿದೆ ಎಂದು ಗುರುತಿಸಿದ್ದರೂ, ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (National Institute of Virology) ಪರೀಕ್ಷೆಗೆ ಕಳುಹಿಸಲಾದ ವ್ಯಕ್ತಿಯ ಮಾದರಿಗಳಲ್ಲಿ ಹೊಸ ಒಮಿಕ್ರೋನ್ ಕೋವಿಡ್ ರೂಪಾಂತರಿ ಇರುವುದು ದೃಢಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
“ನೈಜೀರಿಯಾಕ್ಕೆ ಪ್ರಯಾಣ ಮಾಡಿದ್ದ 52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28, 2021 ರಂದು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್‌ನ ಯಶವಂತರಾವ್ ಚವಾನ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಈ ರೋಗಿಗೆ ಕಳೆದ 13 ವರ್ಷಗಳಿಂದ ಮಧುಮೇಹವಿದೆ. ಈ ರೋಗಿಯ ಸಾವು ಕೋವಿಡ್ ಅಲ್ಲದ ಕಾರಣಗಳಿಂದಾಗಿ ಸಂಭವಿಸಿದ್ದು, ಕಾಕತಾಳೀಯವಾಗಿ, ಇಂದಿನ NIV ವರದಿಯು ಅವರು ಓಮಿಕ್ರಾನ್ ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸುತ್ತದೆ,” ಎಂದು ಬುಲೆಟಿನ್ ಹೇಳಿದೆ.