New Delhi : ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ KPCC ಅಧ್ಯಕ್ಷ D.K. Shivakumar ಹಾಗೂ ಇತರ ನಾಲ್ವರು ಆರೋಪಿಗಳಿಗೆ ಮಂಗಳವಾರ ನವದೆಹಲಿಯ ಚುನಾಯಿತ ಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ (ED Special Court) ಜಾಮೀನು (Bail) ನೀಡಿದೆ.
ಶಿವಕುಮಾರ್ ಪರ ವಕೀಲರು ಹಾಗೂ ED ವಕೀಲರ ವಾದವನ್ನು ಆಲಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ (Special Judge) ವಿಕಾಸ್ ದುಲ್ ಅವರು ಪ್ರತಿಯೊಬ್ಬ ಆರೋಪಿ ತಲಾ ₹1 ಲಕ್ಷದ ಬಾಂಡ್ ಅನ್ನು ಖಾತರಿಯಾಗಿ ನೀಡಬೇಕು, ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡಬಾರದು ಮತ್ತು ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು ಎಂದು ಸೂಚಿಸಿ ಜಾಮೀನು ಮಂಜೂರು ಮಾಡಿದರು.
ಈ ಕುರಿತು ಮಾಧ್ಯಮದವರೊಡದನೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ “ನನ್ನ ನಾಲ್ಕು ಗೆಳೆಯರನ್ನು ಆರೋಪಿಗಳನ್ನಾಗಿ ಮಾಡಿದ್ದು ಮನಸ್ಸಿಗೆ ಬಹಳ ಬೇಸರವಾಗಿತ್ತು. ನಾವು ಯಾವುದೇ ತಪ್ಪು ಮಾಡಿಲ್ಲ. ಕೃಷಿ (Agriculture) ಹಾಗೂ ವ್ಯವಹಾರ ಮಾಡಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಇದ್ದೇವೆ. 2017ರಲ್ಲಿ ಗುಜರಾತ್ (Gujarat) ರಾಜ್ಯಸಭಾ ಚುನಾವಣೆಯ ಬಳಿಕ ಆದಾಯ ತೆರಿಗೆ ಇಲಾಖೆಯವರು (Income Tax Department) ನನ್ನ ಮನೆಯ ಮೇಲೆ ದಾಳಿ ಮಾಡಿ ನಂತರ ಪ್ರಕರಣವನ್ನು The Enforcement Directorate ಗೆ ಹಸ್ತಾಂತರಿಸಿದರು. ಈಗ ನನಗೂ ಮತ್ತು ನನ್ನ ಗೆಳೆಯರಿಗೂ ಜಾಮೀನು ದೊರೆತ್ತಿರುವುದು ಸಂತಸ ತಂದಿದೆ” ಎಂದು ಹೇಳಿದರು.