Shiggaon (Shiggavi), Haveri : ಇತ್ತೀಚೆಗೆ ಸುರಿದ ಬಾರಿ ಮಳೆಯಿಂದ (Rain) ಶಿಗ್ಗಾವಿ ತಾಲ್ಲೂಕಿನ ಮಂಚನಕೊಪ್ಪ (Manchanakoppa) ಗ್ರಾಮದಲ್ಲಿ ಮನೆ ಕಳೆದುಕೊಂಡ ವೃದ್ಧೆಯೊಬ್ಬರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮನೆ (House) ನಿರ್ಮಾಸಿಕೊಟ್ಟಿದ್ದಾರೆ.
ಖಾಸಗಿ ವಾಹಿನಿಯಲ್ಲಿನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಚನಕೊಪ್ಪ ಗ್ರಾಮದ ಬಡಕುಟುಂಬದ ವೃದ್ಧೆ ಕಮಲಮ್ಮ ತಿಮ್ಮನಗೌಡ್ರ (Kamalamma Timmanagowdra) ಅವರ ಮನೆ ಮಳೆಗೆ ಬಿದ್ದು ಹೋಗಿ, ‘ಮನೆಯಿಲ್ಲದೆ ಮಕ್ಕಳಿಲ್ಲದೆ ನಿರ್ಗತಿಕಳಾಗಿದ್ದೇನೆ ನನಗೆ ವಾಸಿಸಲು ಮನೆ ಕಟ್ಟಿಸಿಕೊಡಬೇಕೆಂದು’ ಮುಖ್ಯಮಂತ್ರಿಗಳ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದರು. ಸಂವಾದ ಕಾರ್ಯಕ್ರಮದಲ್ಲಿ ‘ನಾನು ನಿನ್ನ ಮಗನಿದ್ದಂತೆ ಈ ಮಗ ಮನೆ ಕಟ್ಟಿಸಿ ಕೊಡುತ್ತಾನೆ, ಚಿಂತೆ ಬಿಡು’ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ವೃದ್ಧೆ ಕಮಲಮ್ಮ ತಿಮ್ಮನಗೌಡ್ರ ಮಾತನಾಡಿ, “ನನ್ನ ಅಳಲಿಗೆ ಸ್ಪಂದಿಸಿ ನನ್ನ ಮಗನ ಸ್ಥಾನದಲ್ಲಿ ನಿಂತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ನಿರ್ಮಿಸಿ ಕೊಟ್ಟಿರುವುದು ಹರ್ಷ ತಂದಿದೆ ಅವರಿಗೆ ಆಯುಷ್ಯ, ಆರೋಗ್ಯ ಹೆಚ್ಚಲಿ” ಎಂದು ಹೇಳಿದರು.
ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕ್ಕಮ್ಮನವರ, ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ, ಉಪತಹಶೀಲ್ದಾರ್ ಬಸವರಾಜ ಎಚ್ ಸೇರಿದಂತೆ ಮಂಚನಕೊಪ್ಪ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಅಧಿಕಾರಿಗಳ ತಂಡ ವೃದ್ಧೆಗೆ ಮನೆ ಕೀಲಿ ನೀಡುವ ಮೂಲಕ ಹಸ್ತಾಂತರ ಮಾಡಿದ್ದಾರೆ.