back to top
23.3 C
Bengaluru
Monday, July 14, 2025
HomeNewsಹಾಸ್ಯ ಕಲಾವಿದ ಮನದೀಪ್ ರಾಯ್ ಗೆ ಹೃದಯಾಘಾತ

ಹಾಸ್ಯ ಕಲಾವಿದ ಮನದೀಪ್ ರಾಯ್ ಗೆ ಹೃದಯಾಘಾತ

- Advertisement -
- Advertisement -

Bengaluru : ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ರಂಜಿಸಿರುವ ಮನದೀಪ್ ರಾಯ್ (Mandeep Roy) ಯವರಿಗೆ ಅವರಿಗೆ ಹೃದಯಾಘಾತವಾಗಿದ್ದು (Heartattack) ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡದಲ್ಲಿ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ, ಹಾಸ್ಯ ನಟ ಮನದೀಪ್ ರಾಯ್ ಅನಂತ್ ನಾಗ್ (Anant Nag) ಹಾಗೂ ಶಂಕರ್ ನಾಗ್ (Shankar Nag) ಜೊತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಮಿಂಚಿನ ಓಟ , ಬೆಂಕಿಯ ಬಲೆ, ಆಕಸ್ಮಿಕ, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತ ರಕ್ಷಕ , ಆಂಟಿ ಪ್ರೀತ್ಸೆ , ಪ್ರೀತ್ಸೋದ್ ತಪ್ಪ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಡಾ.ರಾಜ್ ಕುಮಾರ್ (Dr Raj Kumar), ವಿಷ್ಣುವರ್ಧನ್ (Vishnuvardhan), ಅಂಬಾರಿಷ್ (Ambareesh) ರವರ ಜೊತೆ ನಟಿಸಿದ್ದಾರೆ.

ಮನದೀಪ್ ರಾಯ್ ಹೃದಯಾಘಾತದಿಂದ ಆಸ್ಪತ್ರೆಗೆ ಸೇರಿರುವ ವಿಚಾರ ಚಿತ್ರೋದ್ಯಮಕ್ಕೆ ತಿಳಿಯುತ್ತಿದ್ದಂತೆಯೇ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಹಲವರು ಹಾರೈಸಿದ್ದಾರೆ. ಆಪ್ತರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಮನದೀಪ್ ರಾಯ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page