Bengaluru: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelan) ಹೋಗುವವರಿಗೆ KSRTC ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಮೈಸೂರು ಮತ್ತು ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಪ್ರತಿ 30 ನಿಮಿಷಕ್ಕೆ ಬಸ್ ವ್ಯವಸ್ಥೆ ಇರುತ್ತದೆ.
ಸಮ್ಮೇಳನದ ಪ್ರಮುಖ ಕಾರ್ಯಕ್ರಮಗಳು
- ಡಿಸೆಂಬರ್ 20: ಬೆಳಿಗ್ಗೆ 6 ಗಂಟೆಗೆ ಧ್ವಜಾರೋಹಣ.
- 7 ಗಂಟೆ: ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭ.
- 11 ಗಂಟೆ: ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕವಿಗಳು ಹಾಗೂ ಸ್ಪೀಕರ್ ಭಾಗವಹಿಸುವರು.
ವಿದೇಶದಲ್ಲಿರುವ ಕನ್ನಡಿಗರಿಗೂ ಆಹ್ವಾನವನ್ನು ನೀಡಲಾಗಿದೆ. ಮಂಡ್ಯ ನಗರದ ದೀಪಾಲಂಕಾರ ಹಾಗೂ ಪೊಲೀಸ್ ಬ್ಯಾಂಡ್ ಮೂಲಕ ಕನ್ನಡ ಗೀತೆಗಳನ್ನು ನುಡಿಸಲಾಗುತ್ತದೆ. ಮೂರು ದಿನಗಳ ನುಡಿ ಜಾತ್ರೆಯಲ್ಲಿ ಸಾಧುಕೋಕಿಲಾ, ಅರ್ಜುನ್ ಜನ್ಯ, ಸ್ಥಳೀಯ ಕಲಾವಿದರು ಭಾಗವಹಿಸಲಿದ್ದಾರೆ.
ಮಳಿಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆ
- 350 ವಾಣಿಜ್ಯ ಮಳಿಗೆಗಳು ಮತ್ತು 450 ಪುಸ್ತಕ ಮಳಿಗೆಗಳು ತೆರೆಯಲಾಗಿವೆ.
- ಸಮ್ಮೇಳನಕ್ಕೆ ಬರುವವರಿಗೆ 140 ಕೌಂಟರ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
- ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಇದೆ.
- ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕಿನಿಂದ ತಲಾ 15 ಬಸ್‌ಗಳು ಉಚಿತವಾಗಿ ಓಡಲಿವೆ.
ಡಿಸೆಂಬರ್ 20ರ ಬೆಳಿಗ್ಗೆ 5 ಗಂಟೆಯಿಂದ 23ರ ಬೆಳಿಗ್ಗೆ 6 ಗಂಟೆವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಂಡ್ಯ ಡಿಸಿ ಡಾ. ಕುಮಾರ ತಿಳಿಸಿದ್ದಾರೆ.