Mandya: ಮಂಡ್ಯ ಜಿಲ್ಲೆ ಹೊಸಬೂದನೂರು ಗ್ರಾಮದಲ್ಲಿ 60 ವರ್ಷಗಳಿಂದ ನಡೆದ ಸರ್ಕಾರಿ ಸ್ಮಶಾನ (graveyard) ಜಾಗವನ್ನು 2017 ರಲ್ಲಿ ಮುಸ್ಲಿಮರಿಗೆ ನೀಡಲಾಗಿದೆ. ಊರಿನಲ್ಲಿ ಮುಸ್ಲಿಮರು ವಾಸ ಮಾಡದಿದ್ದರೂ ಈ ಜಾಗವನ್ನು ಬಿಟ್ಟಿರುವುದರಿಂದ ಈಗ ಗ್ರಾಮಸ್ಥರಲ್ಲಿ ವಿರೋಧ ಹೆಚ್ಚಾಗಿದೆ. ಈ ನಿರ್ಧಾರವನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಹೊಸಬೂದನೂರು ಗ್ರಾಮದಲ್ಲಿ ನೂರಾರು ಹಿಂದೂ ಕುಟುಂಬಗಳು ವಾಸಿಸುತ್ತಿದ್ದಾರೆ. ಈ ಗ್ರಾಮಸ್ಥರು ಕಳೆದ 60 ವರ್ಷಗಳಿಂದ ಸರ್ಕಾರಿ ಜಾಗವನ್ನು ಸ್ಮಶಾನವಾಗಿ ಬಳಸುತ್ತಿದ್ದರು. 1963ರಿಂದ 2017 ರವರೆಗೆ ಗ್ರಾಮದ ಸರ್ವೆ ನಂ. 313 ರ 1 ಎಕರೆ 13 ಗುಂಟೆ ಜಾಗವು ಸರ್ಕಾರಿ ಸ್ಮಶಾನವಾಗಿತ್ತು. ಆದರೆ 2017 ರಲ್ಲಿ ವಕ್ಫ್ ಬೋರ್ಡ್ ಅದನ್ನು ಮುಸ್ಲಿಂ ಮಕಾನವಾಗಿ ಪರಿವರ್ತನೆ ಮಾಡಿತು. ಮಕಾನದಲ್ಲಿ ಮುಸ್ಲಿಮರು ಇಲ್ಲದಿದ್ದರೂ ಈ ಕ್ರಮದ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2021 ರಲ್ಲಿ ವಕ್ಫ್ ಮಂಡಳಿ ಅಂಚು ತೆಗೆದು ಅಂತ್ಯಕ್ರಿಯೆ ನಡೆಸದಂತೆ ನಿರ್ಬಂಧಿಸಿದ್ದರಿಂದ ಗ್ರಾಮಸ್ಥರು ಹೋರಾಟ ನಡೆಸಿದರು. ನಂತರ ಜಿಲ್ಲಾಡಳಿತ ಜಾಗವನ್ನು ಗ್ರಾಮಸ್ಥರಿಗೆ 24 ಗುಂಟೆ ಮಾತ್ರ ನೀಡಿತು. ಆದರೆ ಅಂತ್ಯಕ್ರಿಯೆಗೆ ತಡೆಯೊಂದು ಇನ್ನೂ ಇದೆ. ಗ್ರಾಮ ಪಂಚಾಯಿತಿ ಸ್ಮಶಾನ ಅಭಿವೃದ್ದಿಗೆ ಮುಂದಾದಾಗ ತಹಶೀಲ್ದಾರರು ತಡೆ ಹಾಕಿದ್ದಾರೆ. ಹೀಗಾಗಿ ಗ್ರಾಮಸ್ಥರು ಮುಸ್ಲಿಂ ಮಕಾನವನ್ನು ಹಿಂದೂ ಸ್ಮಶಾನವಾಗಿ ವಾಪಸು ಮಾಡುವಂತೆ ಒತ್ತಾಯಿಸುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ.







