Mantralayam, Andhra Pradesh : ಆಂಧ್ರಪ್ರದೇಶದ ಕರ್ನೂಲ್ (Kurnool) ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಕಲಿಯುಗದ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Guru Raghavendra Tirtha) 351ನೇ ಆರಾಧನಾ (Aradhana Mahotsava) ಮಹೋತ್ಸವಕ್ಕೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು (Sri Subudhendra Teertharu) ಬುಧವಾರ ಗೋ, ಅಶ್ವ, ಧಾನ್ಯ ಪೂಜೆಗಳನ್ನೂ ಮಾಡಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.
ಆಗಸ್ಟ್ 12ರಂದು ರಾಯರ (Raghavendhra Swamy) ಪೂರ್ವಾರಾಧನೆ, ಆಗಸ್ಟ್ 13 ರಂದು ಮಧ್ಯಾರಾಧನೆ ಹಾಗೂ ಆಗಸ್ಟ್ 14 ರಂದು ರಾಯರ ಉತ್ತರಾಧನೆ ನಡೆಯಲಿದ್ದು ನಿತ್ಯವೂ ರಾಯರ ಮಠದಲ್ಲಿ ಬೆಳಗ್ಗೆ ನಿರ್ಮಲ ವಿಸರ್ಜನೆ, ಮೂಲ ರಾಮದೇವರ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.