ದೇಶದ ಅತಿ ದೊಡ್ಡ Car ತಯಾರಿಕಾ ಕಂಪನಿ ಮಾರುತಿ ಸುಜುಕಿ (Maruti Suzuki) ಇಂಡಿಯಾ (MSI) ತನ್ನೆಲ್ಲಾ ವಾಹನ ಶ್ರೇಣಿಯ ಮೇಲಿನ ಬೆಲೆಯನ್ನು 4.3% ರವರೆಗೆ ಹೆಚ್ಚಿಸಿದೆ.
ಕಚ್ಚಾ ವಸ್ತುಗಳ ವೆಚ್ಚದ ಹೆಚ್ಚಳದಿಂದಾಗಿ ಜನಪ್ರಿಯ ಕಾರು ತಯಾರಕಾ ಕಂಪೆನಿಯಾದ Maruti Suzuki ಈ ನಿರ್ಧಾರ ಕೈಗೊಂಡಿದೆ. Input ವೆಚ್ಚಗಳ ಹೆಚ್ಚಳವು ಕಂಪನಿಯ ವಾಹನಗಳ ವೆಚ್ಚದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕಂಪನಿ ಈ ಮೊದಲು ತಿಳಿಸಿತ್ತು.
ಕೆಲ ದಿನಗಳ ಮೊದಲೇ ತನ್ನೆಲ್ಲಾ ಮಾದರಿಗಳ ಮೇಲಿನ ಬೆಲೆಯನ್ನು ಹೆಚ್ಚಿಸಿದ್ದ ಕಂಪನಿಯು, ಇದೀಗ ಮತ್ತೆ ಬೆಲೆಯನ್ನು ಶೇ. 4.3ರವರೆಗೆ ಹೆಚ್ಚಿಸಿದೆ. ಕಳೆದ ವರ್ಷ ಮೂರು ಬಾರಿ ವಾಹನ ಬೆಲೆಗಳನ್ನು ಹೆಚ್ಚಿಸಿದ್ದ ಮಾರುತಿ ಸುಝುಕಿ, ಜನವರಿಯಲ್ಲಿ ಶೇ.1.4, ಏಪ್ರಿಲ್‌ನಲ್ಲಿ ಶೇ.1.6 ಮತ್ತು ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟು ಬೆಲೆ ಹೆಚ್ಚಿಸಿತ್ತು. ಹೊಸ ಬೆಲೆಗಳು ಜನವರಿ ೧೫ ರಿಂದ ಜಾರಿಗೆ ಬರಲಿವೆ ಎಂದು ಕಂಪನಿ ತಿಳಿಸಿದೆ.