ಭಾರತದ ಪ್ರಖ್ಯಾತ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (Maruti Suzuki WagonR) ತನ್ನ ಕಾರುಗಳ ಬೆಲೆಯನ್ನು ಫೆಬ್ರವರಿ 1 ರಿಂದ ರೂ.1,500 ರಿಂದ ರೂ.32,500 ವರೆಗೆ ಏರಿಕೆಯಾಗಲಿದೆ. ಈ ಬೆಲೆ ಏರಿಕೆ ಬಿಸಿ ಡಾಕ್ಟರ್‌ಗಳು ಮತ್ತು ಎಂಜಿನಿಯರ್ ಗಳಿಗೆ ನೆಚ್ಚಿನ ವ್ಯಾಗನ್ಆರ್ ಹ್ಯಾಚ್ಬ್ಯಾಕ್ ಕಾರಿಗೂ ತಟ್ಟಿದೆ.
ಹೆಚ್ಚು ಬೆಲೆ
- ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಸದ್ಯ ಕನಿಷ್ಠ ರೂ.5.54 ಲಕ್ಷ ಮತ್ತು ಗರಿಷ್ಠ ರೂ.7.33 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಲಭ್ಯವಿದೆ.
- ನೂತನ ಮಾದರಿಯಲ್ಲಿ 1-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳು, 5-ಸ್ಪೀಡ್ ಮ್ಯಾನುಲ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ಗಳೊಂದಿಗೆ ಬಂದಿದೆ.
- ಮೈಲೇಜ್: 23.56 ರಿಂದ 34.05 ಕಿಲೋಮೀಟರ್ ಪರ್ ಲೀಟರ್.
ಕಾರು ಮಾದರಿಗಳ ಬೆಲೆ ಏರಿಕೆ
- ಆಲ್ಟೊ ಕೆ10: ರೂ.19,500
- ಸೆಲೆರಿಯೊ: ರೂ.32,500
- ಬ್ರೆಝಾ: ರೂ.20,000
ಇತರ ಮಾದರಿಗಳ ಬೆಲೆಯು ಕೂಡ ಏರಿಕೆಗೊಂಡಿದೆ.