
IPL 2025 ಪ್ರಸ್ತುತ ಭರ್ಜರಿಯಾಗಿ ನಡೆಯುತ್ತಿದೆ. ಟೂರ್ನಿಯ ಅರ್ಧದಷ್ಟು ಪಂದ್ಯಗಳು ಈಗಾಗಲೇ ಮುಗಿದಿವೆ. ಆದರೆ ಈಗ ಹೊಸ ಸಂಚಲನ ಮೂಡಿಸಿರುವ ಆರೋಪ ಹೊರ ಬಂದಿದೆ – ಮ್ಯಾಚ್ ಫಿಕ್ಸಿಂಗ್ (Match fixing)ಕುರಿತು.
ಎಪ್ರಿಲ್ 19ರಂದು ಜೈಪುರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಉದ್ದೇಶಪೂರ್ವಕವಾಗಿ ಸೋತಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪವನ್ನು ರಾಜಸ್ಥಾನ ಕ್ರಿಕೆಟ್ ಅಕಾಡೆಮಿ ತಾತ್ಕಾಲಿಕ ಸಮಿತಿಯ ಸಂಚಾಲಕರಾಗಿರುವ ಹಾಗು ಗಂಗಾನಗರ ಕ್ಷೇತ್ರದ ಬಿಜೆಪಿ ಶಾಸಕ ಜೈದೀಪ್ ಬಿಹಾನಿ ಮಾಡಿದ್ದಾರೆ.
ಅವರು ಹೇಳಿದಂತೆ, “ರಾಜಸ್ಥಾನ 2 ರನ್ಗಳಿಂದ ಸೋತಿದ್ದು, ಅಂತಿಮ ಓವರ್‌ನಲ್ಲಿ ಗೆಲ್ಲಲು 9 ರನ್ ಬೇಕಿತ್ತು. ಕೈಯಲ್ಲಿ 6 ವಿಕೆಟ್ ಇತ್ತಾ. ಈ ಪರಿಸ್ಥಿತಿಯಲ್ಲಿ ಸೋಲುವುದು ಸಹಜವಲ್ಲ. ಇದರ ಹಿಂದೆ ಮ್ಯಾಚ್ ಫಿಕ್ಸಿಂಗ್ ಇರಬಹುದು” ಎಂದು ಹೇಳಿದರು.
ಜೈದೀಪ್ ಬಿಹಾನಿ ಮತ್ತಷ್ಟು ಮಾಹಿತಿ ನೀಡುತ್ತಾ, “ಈ ವಿಷಯದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು. ಜನತೆ ಮುಂದೆ ಎಲ್ಲಾ ಮಾಹಿತಿ ಬಹಿರಂಗಪಡಿಸಬೇಕು” ಎಂಬ ಗಂಭೀರ ಒತ್ತಾಯವನ್ನೂ ಹಾಕಿದ್ದಾರೆ.
ಅವರು ಈ ಹಿಂದೆ ಕೂಡಾ ರಾಜಸ್ಥಾನ ರಾಯಲ್ಸ್ ತಂಡದ ಕಾರ್ಯಪದ್ದತಿ ಕುರಿತು ಶಂಕೆ ವ್ಯಕ್ತಪಡಿಸಿದ್ದರು. ಇದೀಗ ಈ ಹೊಸ ಆರೋಪ ಮತ್ತೆ ಐಪಿಎಲ್‌ನಲ್ಲಿ ನೈತಿಕತೆಯ ಬಗ್ಗೆ ಪ್ರಶ್ನೆ ಎಬ್ಬಿಸಿದೆ.