Ramanagara : ಮೇಕೆದಾಟು ಅಣೆಕಟ್ಟು (Mekedatu Dam) ನಿರ್ಮಾಣಕ್ಕೆ ಒತ್ತಾಯಿಸಿ ಜನವರಿ 9 ರಿಂದ 10 ದಿನಗಳ Congress ಪಾದಯಾತ್ರೆಗೆ ಸಂಬಂಧಿಸಿದಂತೆ ರಾಮನಗರ ತಾಲ್ಲೂಕಿನ ಖಾಸಗಿ ರೆಸಾರ್ಟ್‍ನಲ್ಲಿ ಮಂಗಳವಾರ ಸಂಸದ ಡಿ.ಕೆ. ಸುರೇಶ್ ಕೈಲಾಂಚ, ಹಾರೋಹಳ್ಳಿ, ಮರಳವಾಡಿ ಹೋಬಳಿಗಳ ಗ್ರಾ.ಪಂ. ವ್ಯಾಪ್ತಿಯ ಮುಖಂಡರ ಜೊತೆ ಪೂರ್ವಭಾವಿ ಸಭೆ ಆಯೋಜಿಸಿದ್ದರು
ಸಭೆಯಲ್ಲಿ ಮಾತನಾಡಿದ ಸಂಸದರು “ರಾಜ್ಯದ ಜನತೆಯ ಹಿತಕ್ಕಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಜನರು ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು. ಪಕ್ಷಾತೀತವಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಹೋರಾಟವಾಗುತ್ತಿದ್ದು, ಕಾಂಗ್ರೆಸ್ ಕೇವಲ ಪಾದಯಾತ್ರೆಯ ನೇತೃತ್ವವಹಿಸಿಕೊಂಡಿದೆ. ಇದು ನಾಡಿನ ಜನರ ಒಳಿತಿಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾಡು-ನುಡಿ, ಜಲ, ಗಡಿ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವ ವಿವಿಧ ಸಂಘಟನೆಗಳು, ಸಂಘ, ಸಂಸ್ಥೆಗಳು, ಭಾಗವಹಿಸಲಿವೆ. ಜನವರಿ 9 ರಂದು ಮೇಕೆದಾಟಿನಿಂದ ಪಾದಯಾತ್ರೆ ಆರಂಭಿಸಿ ಬೆಂಗಳೂರಿನತ್ತ ತೆರಳಲಾಗುವುದು” ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ಕೆ. ರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಜಿ.ಪಂ. ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ಮುಖಂಡರಾದ ಕೆ. ಶೇಷಾದ್ರಿ, ವಿ.ಎಚ್. ರಾಜು, ಸಿ.ಎನ್.ಆರ್. ವೆಂಕಟೇಶ್, ಕೆ. ರಮೇಶ್, ಕಾಂತರಾಜ್ ಪಟೇಲ್, ಜಿ. ಮಹೇಂದ್ರ, ಮುತ್ತರಾಜು, ಎ.ಬಿ. ಚೇತನ್‍ಕುಮಾರ್, ಸಮದ್ ಮತ್ತಿತ್ತರರು ಉಪಸ್ಥಿತರಿದ್ದರು.