
Melukote, Mandya : ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಸನ್ನಿಧಿಯಲ್ಲಿ (Sri Cheluvanarayana Swamy Temple) ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಸಂಕ್ರಾಂತಿ (Makara Sankranti) ಉತ್ಸವ ಸರಳ ಹಾಗೂ ಸಾಂಕೇತಿಕವಾಗಿ ನಡೆಯಿತು. ದೇಗುಲಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಿ ಧಾರ್ಮಿಕ ಪರಂಪರೆಗೆ ಧಕ್ಕೆಯಾಗದಂತೆ ಸೇವೆಗಳನ್ನು ಸಲ್ಲಿಸಲಾಯಿತು.
ಯತಿರಾಜದಾಸರ್ ಗುರುಪೀಠದಿಂದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಕುಟುಂಬದವರು ಪ್ರಥಮ ದಿನದ ಕೈಂಕರ್ಯಗಳನ್ನು ನೆರವೇರಿಸಿದರು
ದೇವಸ್ಥಾನದ ಒಳ ಪ್ರಾಕಾರದಲ್ಲಿ ಸಂಕ್ರಾಂತಿ ಅಂಗವಾಗಿ ಶ್ರೀದೇವಿ ಭೂದೇವಿ ರಾಮಾನುಜಾಚಾರ್ಯರ ಸಮೇತನಾದ ಚೆಲುವ ನಾರಾಯಣಸ್ವಾಮಿಗೆ ಅಭಿಷೇಕ, ಪುಷ್ಪಕೈಂಕರ್ಯ, ಸಂಕ್ರಾಂತಿಫಲ ಪಠಣ, ಮೂಲ ಸನ್ನಿಧಾನದಲ್ಲಿ ವಸಂತರಾಗ ಸೇವೆಗಳು ನಡೆದವು.