Gundre Range, Bandipur Tiger Reserve, H.D. Kote (Heggadadevankote), Mysuru : ಬಂಡಿಪುರ ರಾಷ್ಟ್ರೀಯ ಉದ್ಯಾನದ ಗುಂಡ್ರೆ ಅರಣ್ಯ ವಲಯದ ಕಬಿನಿ ಹಿನ್ನೀರಿನ ನಾಯಳ್ಳಿ ಬೀಟ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹುಲಿಗಳ ನಡುವಣ ಕಾದಾಟದಲ್ಲಿ ಮೃತಪಟ್ಟ ಎಂಟು ವರ್ಷದ ಗಂಡು ಹುಲಿಯ ದೇಹ ಪತ್ತೆಯಾಗಿದ್ದೆ.
3–4 ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಧಿಕಾರಿಗಳು ಶಂಕಿಸಿರುವ ಹುಲಿಯ ತಲೆ ಮೇಲೆ ಪರಚಿದ ಗಾಯ ಹಾಗೂ ಬೆನ್ನ ಹಿಂದೆ ಮಾಂಸ ಕಿತ್ತು ಬಂದಿರುವುದು ಕಂಡುಬಂದಿದೆ. ಇಲಾಖೆಯ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹುಲಿ ಶವವನ್ನು ಸ್ಥಳದಲ್ಲಿ ಸುಡಲಾಯಿತು.
ಸ್ಥಳಕ್ಕೆ ಗುಂಡ್ರೆ ಅರಣ್ಯ ವಲಯ ಅಧಿಕಾರಿ ಶಶಿಧರ್, ಡಿಸಿಎಫ್ ವಿ.ಕರಿಕಾಳನ್, ಎಸಿಎಫ್ ರವಿಕುಮಾರ್, ಎಸ್‌ಟಿಪಿಎಫ್ ಎಸಿಎಫ್ ಬಸವರಾಜು ಉಳ್ಳನ್‌ರವರ್, ವೈಲ್ಡ್ ಲೈಫ್ ವಾರ್ಡನ್ ಕೃತಿಕಾ ಆಲನಹಳ್ಳಿ, ಎನ್‌ಜಿಒ ವೆಂಕಟೇಶ್, ಗ್ರಾ.ಪಂ ಸದಸ್ಯ ನಂಜಪ್ಪ ಭೇಟಿ ನೀಡಿ ಪರಿಶೀಲಿಸಿದರು.