Home Auto ಭಾರತದಲ್ಲಿ Mercedes-Maybach SL 680 ಲಾಂಚ್

ಭಾರತದಲ್ಲಿ Mercedes-Maybach SL 680 ಲಾಂಚ್

203
Mercedes-Maybach SL 680

Bengaluru: ಮರ್ಸಿಡಿಸ್-ಬೆನ್ಜ್ ಕಂಪನಿಯ ಮೇಬ್ಯಾಕ್ ಸರಣಿಯ ಕಾರುಗಳು ಭಾರತದಲ್ಲಿ ಬಹಳ ಜನಪ್ರಿಯ. ಈಗ, ಕಂಪನಿಯು ಹೊಸ ಮರ್ಸಿಡಿಸ್-ಮೇಬ್ಯಾಕ್ SL 680 (Mercedes-Maybach SL 680) ಮಾನೋಗ್ರಾಮ್ ಸರಣಿಯನ್ನು ಬಿಡುಗಡೆ ಮಾಡಿದೆ. ಇದು ಒಪನ್-ಟಾಪ್, 2 ಸೀಟುಗಳ ಸ್ಪೋರ್ಟ್ಸ್ ಕಾರು ಆಗಿದ್ದು, ಭಾರತದಲ್ಲಿ ಕೇವಲ ಮೂರು ಯೂನಿಟ್ ಗಳಷ್ಟೇ ಮಾರಾಟವಾಗಲಿದೆ. ಆದರೆ ಗ್ರಾಹಕರು ಈ ಕಾರಿನ ವಿತರಣೆಗೆ 2026ರ ಮೊದಲ ತ್ರೈಮಾಸಿಕದವರೆಗೆ ಕಾಯಬೇಕಾಗುತ್ತದೆ.

ಈ ಐಷಾರಾಮಿ ಕಾರಿನ ಎಕ್ಸ್-ಶೋರೂಮ್ ಬೆಲೆ ₹4.2 ಕೋಟಿ. ಇದು ರೆಡ್ ಆಂಬಿಯನ್ಸ್ ಮತ್ತು ವೈಟ್ ಆಂಬಿಯನ್ಸ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

ವೈಶಿಷ್ಟ್ಯಗಳು ಮತ್ತು ವಿನ್ಯಾಸ

  • ಮೇಬ್ಯಾಕ್ ಶೈಲಿಯ ಬಾನೆಟ್, ಸಿಗ್ನೇಚರ್ ಕ್ರೋಮ್ ಗ್ರಿಲ್ ಮತ್ತು ಮರ್ಸಿಡಿಸ್ ಸ್ಟಾರ್ ಲೋಗೋ.
  • ಹಿಂಭಾಗದಲ್ಲಿ ಮೇಬ್ಯಾಕ್-tailpipe ಟ್ರಿಮ್ ಗಳು ಮತ್ತು ವಿಶೇಷ ಡಿಸೈನ್ ಲೈಟ್ ಗಳು.
  • 21-ಇಂಚಿನ ಅಲಾಯ್ ಚಕ್ರಗಳು, ಕ್ರೋಮ್ ಅಸೆಂಟ್ ಗಳು, ಡಬಲ್ ಸ್ಕೂಪ್ಸ್ ಇರುವ ಸ್ಪೋರ್ಟಿ ವಿನ್ಯಾಸ.

ಐಷಾರಾಮಿ ಒಳಾಂಗಣ ಮತ್ತು ತಂತ್ರಜ್ಞಾನ

  • ಕ್ರಿಸ್ಟಲ್ ವೈಟ್ ನಾಪಾ ಲೆದರ್ ಸೀಟುಗಳು, ಸ್ಟೇನ್ಲೆಸ್-ಸ್ಟೀಲ್ ಪೆಡಲ್ ಗಳು.
  • ಧ್ವನಿ-ಆಪ್ಟಿಮೈಸ್ಡ್ ಎಕ್ಸಾಸ್ಟ್ ಸಿಸ್ಟಮ್ ಮತ್ತು ಹಿಂಭಾಗದ ಆಕ್ಸಲ್ ಸ್ಟೀರಿಂಗ್.
  • ಸ್ಮೂತ್ ಸಸ್ಪೆನ್ಷನ್ ಮತ್ತು ಸುಧಾರಿತ ಡ್ರೈವಿಂಗ್ ಅನುಭವ.

ಪವರ್ ಮತ್ತು ಸ್ಪೀಡ್

  • 4.0-ಲೀಟರ್ ಬಿಟರ್ಬೋ V8 ಎಂಜಿನ್ – 585 ಎಚ್‌ಪಿ ಪವರ್, 800 Nm ಟಾರ್ಕ್.
  • 9G ಸ್ವಯಂಚಾಲಿತ ಪ್ರಸರಣ, ಗರಿಷ್ಠ ವೇಗ 260 ಕಿಮೀ/ಗಂ.
  • 0-100 ಕಿಮೀ ವೇಗ ಕೇವಲ 4.1 ಸೆಕೆಂಡುಗಳಲ್ಲಿ ತಲುಪುವುದು.
  • 4MATIC ವೇರಿಯಬಲ್ ಆಲ್-ವೀಲ್ ಡ್ರೈವ್ ವ್ಯವಸ್ಥೆ.

ಮರ್ಸಿಡಿ ಸ್-ಮೇಬ್ಯಾಕ್ ಭಾರತದಲ್ಲಿ ದೊಡ್ಡ ಬೇಡಿಕೆಯಿರುವ ಬ್ರ್ಯಾಂಡ್. ಭಾರತ ಈಗಾಗಲೇ ಮೇಬ್ಯಾಕ್‌ನ ಟಾಪ್ 10 ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಭವಿಷ್ಯದಲ್ಲಿ ಇದರ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಕಂಪನಿ ನಿರೀಕ್ಷಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page