Rio de Janeiro, Brazil : ಪ್ರಧಾನಿ ನರೇಂದ್ರ ಮೋದಿ (PM Modi) ಬ್ರೆಜಿಲ್‌ನಲ್ಲಿ (Brazil) ನಡೆದ ಜಿ-20 ಶೃಂಗಸಭೆಯಲ್ಲಿ (G20 Summit) ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯವರನ್ನು (Giorgia Meloni) ಭೇಟಿಯಾದರು. ಬ್ರೆಜಿಲ್, ಸಿಂಗಾಪುರ, ಬ್ರಿಟನ್, ಇಟಲಿ, ಫ್ರಾನ್ಸ್, ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ಜಾಗತಿಕ ನಾಯಕರೊಂದಿಗೆ ಪ್ರಧಾನಿಯವರು ಮಾತುಕತೆ ನಡೆಸಿದರು.
ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ನಲ್ಲಿ ನಡೆದ ಎರಡು ದಿನಗಳ ಈ ಶೃಂಗಸಭೆಯಲ್ಲಿ US ಅಧ್ಯಕ್ಷ ಜೋ ಬೈಡನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
ಪ್ರಧಾನಿ ಮೋದಿ ಮತ್ತು ಮೆಲೋನಿ ಅವರ ದ್ವಿಪಕ್ಷೀಯ ಚರ್ಚೆಯಲ್ಲಿ, ಉಭಯ ದೇಶಗಳ ರಕ್ಷಣಾ ಸಹಕಾರ ಮತ್ತು ಭದ್ರತೆ ಸೇರಿದಂತೆ ಸಂಬಂಧಗಳನ್ನು ಬಲಪಡಿಸುವ ವಿಷಯಗಳು ಚರ್ಚಿಸಲ್ಪಟ್ಟವು.
ಪ್ರಧಾನಿಯವರು ತಮ್ಮ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಇಟಲಿ ಪ್ರಧಾನಿ ಜೊತೆಗಿನ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಶೃಂಗಸಭೆಯ ಮೊದಲ ದಿನ, ಪ್ರಧಾನಿ ಮೋದಿ ಇಂಡೋನೇಷ್ಯಾ ಮತ್ತು ಪೋರ್ಚುಗಲ್ ನಾಯಕರೊಂದಿಗೆ ಮಾತುಕತೆ ನಡೆಸಿ, ವಾಣಿಜ್ಯ ಮತ್ತು ರಕ್ಷಣಾ ಸಹಕಾರಗಳನ್ನು ಬಲಪಡಿಸಲು ಒತ್ತು ನೀಡಿದರು.
ಭಾರತ-ಇಂಡೋನೇಷ್ಯಾ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ಭರವಸೆಯನ್ನು ಮೋದಿ ನೀಡಿದರು.