Mysuru, Mysore : ನಾಗರಹೊಳೆ ಮತ್ತು ಬಂಡೀಪುರ (Nagarahole & Bandipur National Park) ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನಲ್ಲಿ ಕಾಣಸಿಗುತಿದ್ದ ವನ್ಯಪ್ರೇಮಿಗಳ ನೆಚ್ಚಿನ ‘ಮಿಸ್ಟರ್ ಕಬಿನಿ ಶಕ್ತಿಮಾನ್’ (Mr Kabini Shaktiman) ಖ್ಯಾತಿಯ ‘ಭೋಗೇಶ್ವರ’ (Bhogeshwara Elephant Death) ಆನೆಯು ವಯೋಸಹಜ ಕಾರಣಗಳಿಂದಾಗಿ ಸಾವಿಗೀಡಾಗಿದೆ.
ಅತಿ ದೊಡ್ಡ ದಂತಗಳನ್ನು ಹೊಂದಿ, ಆಕರ್ಷಕವಾಗಿ ಕಾಣಿಸುತ್ತಿದ್ದ ಈ ಆನೆ ಏಷ್ಯಾ ತಳಿಯ ಆನೆಗಳಲ್ಲೇ 8 ಅಡಿ ಉದ್ದದ ದಂತಗಳನ್ನು ಹೊಂದಿದ್ದಿದ್ದು ವಿಶೇಷವಾಗಿತ್ತು. ಈ ಆನೆಯು ನಡೆದು ಬರುತ್ತಿದ್ದರೆ ಎರಡೂ ದಂತಗಳು ನೆಲವನ್ನು ತಾಕುತ್ತಿದ್ದ ಕಾರಣ ಹುಲ್ಲನ್ನು ಸರಿಯಾಗಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಹಲವು ವಿಶೇಷಗಳ ಕಾರಣದಿಂದಾಗಿ ವನ್ಯಜೀವಿ ಪ್ರಿಯರ ನೆಚ್ಚಿನ ಆನೆಯಾಗಿತ್ತು.
ಸೌಮ್ಯ ಸ್ವಭಾವದ ಮಿಸ್ಟರ್ ಕಬಿನಿ ಶಕ್ತಿಮಾನ್ ಮೃತಕ್ಕೆ ಅನೇಕ ವನ್ಯಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.