Home Business Namma Metroದ ವಿದ್ಯುತ್ ಕೇಬಲ್ ಕಳವು

Namma Metroದ ವಿದ್ಯುತ್ ಕೇಬಲ್ ಕಳವು

274
Namma Metro

Bengaluru: ನಮ್ಮ ಮೆಟ್ರೋ (Namma Metro) ಬೆಂಗಳೂರು ಜನತೆಗೆ ಅನುಕೂಲಕರವಾದ ಸಂಚಾರ ವ್ಯವಸ್ಥೆಯಾಗಿದೆ. ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳಿಗೆ ವಿದ್ಯುತ್ ಕೇಬಲ್ ಕಳ್ಳತನ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕಳೆದ ಮೂರು ತಿಂಗಳಲ್ಲಿ ಪೀಣ್ಯ, ರಾಜಾಜಿನಗರ, ಮತ್ತು ಬಸವನಗುಡಿ ಮೆಟ್ರೋ ಮಾರ್ಗಗಳಲ್ಲಿ ಹೈಸ್ಪೀಡ್ ರೈಲುಗಳಿಗೆ ವಿದ್ಯುತ್ ಪೂರೈಸುವ ಕೇಬಲ್‌ಗಳನ್ನು ಕಳ್ಳರು ಕದ್ದಿದ್ದಾರೆ. 2024ರ ಅಕ್ಟೋಬರ್‌ನಿಂದ ಜನವರಿವರೆಗೆ ಲಕ್ಷಾಂತರ ರೂಪಾಯಿಗಳ ಮೌಲ್ಯದ ಕೇಬಲ್ ಕಳುವಾಗಿದ್ದು, BMRCL ಈ ಕುರಿತು ಪೊಲೀಸರಿಗೆ ದೂರು ನೀಡಿದೆ.

ಹೈವೋಲ್ಟೆಜ್ ಪ್ರವಹಿಸುವ ಮೆಟ್ರೋ ಟ್ರ್ಯಾಕ್‌ಗಳಡಿಯಲ್ಲಿ ಕೇಬಲ್ ಕಳ್ಳತನ ಎಷ್ಟು ಸುಲಭವಾಗಿದೆ ಎಂಬುದು ಪ್ರಶ್ನಾರ್ಹವಾಗಿದೆ. ಈ ಕೃತ್ಯ ಸಾಮಾನ್ಯ ಕಳ್ಳರಿಂದ ಸಾಧ್ಯವಿಲ್ಲ ಎಂಬ ಅನುಮಾನ ಬೆಳೆಯುತ್ತಿದೆ. ಸಿಬ್ಬಂದಿ ಸಹಕಾರ ಅಥವಾ ತಾಂತ್ರಿಕ ಜ್ಞಾನವಿಲ್ಲದೆ ಇದು ಕಷ್ಟಕರ ಎಂಬ ಶಂಕೆ ಉದ್ಭವಿಸಿದೆ.

ಈಗಾಗಲೇ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ನಮ್ಮ ಮೆಟ್ರೋ ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page